ಬನಾರಸ್ನಿಂದ 4 ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ



(ನ್ಯೂಸ್‌ ಕಡಬ) newskadaba.com,  ನ.08: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಭಾರತದಲ್ಲಿ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ವಿಭಾಗಕ್ಕೆ ಇದೀಗ ಮತ್ತು ನಾಲ್ಕು ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲು ಸೇರ್ಪಡೆಯಾಗಿದೆ. ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್, ಕೇರಳ, ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುವ ದಕ್ಷಿಣ ರೈಲ್ವೆಯ ಮೊದಲ ಅಂತರ-ರಾಜ್ಯ ಅರೆ-ಹೈ-ಸ್ಪೀಡ್ ಪ್ರೀಮಿಯಂ ಸೇವೆಯಾಗಿದೆ.





ರೈಲು ಕೇರಳ ಮತ್ತು ತಮಿಳುನಾಡಿನಾದ್ಯಂತದ ಪ್ರಮುಖ ನಗರಗಳಾದ ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್ ಮತ್ತು ಸೇಲಂ ಮೂಲಕ ಹಾದುಹೋಗುತ್ತದೆ, ನಂತರ ಕೃಷ್ಣರಾಜಪುರಂ ಮತ್ತು ಕೆಎಸ್ಆರ್ ಬೆಂಗಳೂರು ತಲುಪುತ್ತದೆ. ಚೇರ್ ಕಾರ್ ಸೀಟುಗಳ ಬೆಲೆ ₹ 1,095 ಆಗಿದ್ದರೆ, ಎಕ್ಸಿಕ್ಯೂಟಿವ್ ಕ್ಲಾಸ್ ಸೀಟುಗಳ ಬೆಲೆ ₹ 2,289 ಮೂರು ರಾಜ್ಯಗಳ ನಡುವಿನ ಹೊಸ ಸಂಪರ್ಕವು ವ್ಯವಹಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.






error: Content is protected !!
Scroll to Top