(ನ್ಯೂಸ್ ಕಡಬ) newskadaba.com, ನ.06: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ನಟೋರಿಯಸ್ ಕಳ್ಳನನ್ನ ವಿದ್ಯಾರಣ್ಯಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಸೈಯ್ಯದ್ ಅಸ್ಲಾಂ ಪಾಷಾ, ಬಂಧಿತ ಆರೋಪಿ. ಇದುವರೆಗೂ ಕಳ್ಳತನದ ಕೆರಿಯರ್‌ನಲ್ಲಿ 150 ಕಳ್ಳತನ ಕೇಸ್‌ಗಳಲ್ಲಿ ಆರೋಪಿ. ಕಳ್ಳತನದ ತಂತ್ರಗಳು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಹಗಲಲ್ಲಿ ಐಷಾರಾಮಿಗಳ ಮನೆಗಳ ರೆಕ್ಕಿ, ಕತ್ತಲಲ್ಲಿ ಕೈಚಳ:
ಆರೋಪಿ ವೃತ್ತಿಪರ ಖತರ್ನಾಕ್ ಕಳ್ಳನಾಗಿದ್ದು ಹಗಲೆಲ್ಲ ಐಷಾರಾಮಿ ಮನೆಗಳನ್ನ ರೆಕ್ಕಿ ಮಾಡುತ್ತಿದ್ದ. ರಾತ್ರಿಯಾಗುತ್ತಿದ್ದಂತೆ ಕೈಚಳಕ ತೋರಿಸುತ್ತಿದ್ದ ಖದೀಮ. ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ದರೆ ಕುತ್ತಿಗೆಯಲ್ಲಿರುವ ಸರಗಳನ್ನು ಎಗರಿಸಿ ಎಸ್ಕೇಪ್ ಯಾರದು ಎನ್ನುವಷ್ಟರಲ್ಲೆ ಎಸ್ಕೇಪ್ ಆಗಿಬಿಡುತ್ತಿದ್ದ. ಇನ್ನು ಕಿಟಕಿ ಪಕ್ಕದಲ್ಲಿ ಮೇನ್ ಡೋರ್ ಇದ್ದರೆ, ಕಿಟಕಿ ಗ್ಲಾಸ್ ಒಡೆದು ಡೋರ್ ಓಪನ್ ಮಾಡುತ್ತಿದ್ದ ಆರೋಪಿ.








