(ನ್ಯೂಸ್ ಕಡಬ) newskadaba.com, ಅ.16- ಅಪೆಕ್ಸಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ದಿ ಮಾ ಫಾಯ್ ಫೌಂಡೇಶನ್ ನೇತೃತ್ವದಲ್ಲಿ ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ವರ್ಗದ ತರುಣ, ತರುಣಿಯರ ವೃತ್ತಿ ಜೀವನಕ್ಕೆ ನೆರವಾಗುವ ಬಿಎಫ್ಎಸ್ಐ (ಬ್ಯಾಂಕಿಂಗ್, ಫೈನಾನ್ಸ್ ಸರ್ವೀಸಸ್ ಮತ್ತು ಇನ್ಶೂ ರೆನ್ಸ್) ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಕೆ.ಆರ್. ಪುರಂನ ಡಾನ್ ಬಾಸ್ಕೋ ಕಾಲೇಜಿನಲ್ಲಿ ‘ಅಹಾನ್ ವೊಕೇಶನಲ್ ಸೆಂಟರ್: ಬಿಎಫ್ಎಸ್ಐ’ ಅನ್ನು ಆರಂಭಿಸಿದೆ.
ಬೆಂಗಳೂರಿನ ವಿದ್ಯಾರ್ಥಿಗಳಿಗೆ ಉದ್ಯಮ ಸಂಬಂಧಿ ತರಬೇತಿ, ಜೀವನ ಕೌಶಲಗಳು ಮತ್ತು ಬಿಎಫ್ಎಸ್ಐಕ್ಷೇತ್ರದಲ್ಲಿ ವೃತ್ತಿ ಹೊಂದಲು ಬೇಕಾದ ತರಬೇತಿ ಒದಗಿಸುವಂತೆ ವಿನ್ಯಾಸಗೊಳಿಸ ಲಾದ ಈ ಯೋಜನೆಯಮೊದಲ ಹಂತದಲ್ಲಿ ಅಂತಿಮ ವರ್ಷದ ಪದವಿ ತರಗತಿಯಲ್ಲಿರುವ 220 ಮಂದಿಗೆ ಬಿಎಫ್ಎಸ್ಐಉದ್ಯೋಗ ಕೌಶಲ್ಯಗಳನ್ನು ಒದಗಿಸಲಾಗುತ್ತದೆ. ವಿಶೇಷವೆಂದರೆ ಈ ಯೋಜನೆಯಲ್ಲಿ ಶೇ.60ರಷ್ಟು ವಿದ್ಯಾರ್ಥಿನಿಯರಿಗೆ ತರಬೇತಿ ಒದಗಿಸುವ ಗುರಿ ಇಟ್ಟುಕೊಳ್ಳ ಲಾಗಿದ್ದು, ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು ನೀಡಲಾಗಿದೆ.
ವಿದ್ಯಾರ್ಥಿಗಳ ಬೆಳವಣಿಗೆಗೆ ಸಮಗ್ರ ವಿಧಾನವನ್ನು ಅನುಸರಿಸಲಾಗುತ್ತಿದ್ದು, ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ತಜ್ಞರಿಂದ ಕಾರ್ಯಾಗಾರಗಳು, ಇಂಟರ್ನ್ ಶಿಪ್‌ಗಳು ಮತ್ತು ವೈಯಕ್ತಿಕ ಮಾರ್ಗದರ್ಶನ ಒದಗಿಸಲಾಗುತ್ತದೆ.












