ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಜೀವಾವಧಿ ಶಿಕ್ಷೆ!

(ನ್ಯೂಸ್ ಕಡಬ) newskadaba.com ಜೋಧ್‍ಪುರ, ಎ.25. 2013ರಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಮೂಲ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ದೊರಕಿದೆ. ಈ ಮೂಲಕ ದೇಶಾದ್ಯಂತ ಬಹಳ ಜನರ ಆಕ್ರೋಶಕ್ಕೆ ಗುರಿಯಾಗಿದ್ದ, 5 ವರ್ಷ ಹಳೆಯದಾದ ಈ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಕ ಶಾಸ್ತಿಯಾಗಿದೆ.

2013ರಲ್ಲಿ ಮಧ್ಯಪ್ರದೇಶದ ಛಿಂದ್‌ವಾರಾದ ತನ್ನ ಆಶ್ರಮದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಅಪ್ರಾಪ್ತೆಯ ಮೇಲೆ 77ರ ಹರೆಯದ ಅಸಾರಾಂ ಬಾಪುವು ಅತ್ಯಾಚಾರವೆಸಗಿದ್ದನು. ಈ ಕುರಿತು ಬಾಲಕಿಯು ಪೋಲೀಸರಿಗೆ ದೂರು ನೀಡಿದ್ದಳು. ಆದರೆ ಆ ಸಮಯದಲ್ಲಿ ಅಸಾರಾಂ ಬಾಪು ತನ್ನ ವಿರುದ್ದದ ಆರೋಪಳು ನಿಜವಲ್ಲ ಎಂದಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಅಸಾರಾಂ ಸೇರಿದಂತೆ ಆತನ ಸಹವರ್ತಿಗಳಾದ ಶಿವ, ಪ್ರಕಾಶ್, ಶಿಲ್ಪಿ, ಶರದ್‌ ಎಂಬವರನ್ನು ಬಂಧಿಸಿದ್ದರು.

Also Read  ಚಪಾತಿ ಹಿಟ್ಟಿಗೆ ಉಗುಳಿ ಅಡುಗೆ ತಯಾರಿ ! ➤  ವ್ಯಕ್ತಿ ಅರೆಸ್ಟ್

ನ್ಯಾಯಾಲಯವು ಶಿವ, ಪ್ರಕಾಶ್ ರನ್ನು ನಿರ್ದೋಶಿಗಳು ಎಂದು ಪರಿಗಣಿಸಿ, ಶಿಲ್ಪಿ, ಶರದ್‌ರನ್ನು ಅಪರಾಧಿಗಳು ಎಂದು ಇಂದು ಘೋಷಿಸಿದೆ ಹಾಗೂ ಅಸಾರಾಂಗೆ ಜೀವಾವಧಿ ಶಿಕ್ಷೆ ನೀಡುವಂತೆ ಆದೇಶ ಹೊರಡಿಸಿದೆ. 10,000 ಕೋಟಿ ರೂ. ಮೌಲ್ಯದ ಸಾಮಾಜ್ಯ ಈತನ ವಿರುದ್ದ ತೀರ್ಪು ಬಂದಿರುವ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಏಪ್ರಿಲ್ 30ರವರೆಗೆ ಜೋಧ್‍ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Also Read  ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ 2023 ರ 'ವರ್ಷದ ಗವರ್ನರ್' ಪ್ರಶಸ್ತಿ

error: Content is protected !!
Scroll to Top