ಉಡುಪಿ: ಪತ್ರಕರ್ತ ಜನಾರ್ದನ್ ಕೊಡವೂರಿಗೆ ವಾಲ್ಮೀಕಿ ಸಮ್ಮಾನ್ ಪ್ರಶಸ್ತಿ



(ನ್ಯೂಸ್ಕಡಬ) newskadaba.com,   .13. ಉಡುಪಿ: ವಾಲ್ಮೀಕಿ ನಾಡುಕಂಡ ಶ್ರೇಷ್ಠ ಸಂತ. ಬದುಕಿನಲ್ಲಿ ಪರಿವರ್ತನೆ ಮೂಲಕ ವ್ಯಕ್ತಿ ಎಷ್ಟು ಉನ್ನತ ಸ್ಥಾನಕ್ಕೆ ತಲುಪಬಹುದು ಎಂಬುದಕ್ಕೆ ವಾಲ್ಮೀಕಿ ಮಾದರಿ. ಅವರ ಆದರ್ಶಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಅವರು ಮಹರ್ಷಿ ವಾಲ್ಮೀಕಿ ಸಂಘದ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಈ ಸಮಯದಲ್ಲಿ ಸಂಘಟಕ, ಹಿರಿಯ ಛಾಯಾಚಿತ್ರ ಪತ್ರಕರ್ತ ಜನಾರ್ದನ್ ಕೊಡವೂರು ಅವರಿಗೆ ಮಹರ್ಷಿ ವಾಲ್ಮೀಕಿ ಸಮ್ಮಾನ್ – ೨೦೨೫ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅಭಿನಂದನಾ ಮಾತುಗಳನ್ನಾಡಿದರು.





.ಸಾಹಿತಿ ಡಾ. ನಿಕೇತನ ಉಪನ್ಯಾಸ ನೀಡಿದರು. ವಾಲ್ಮೀಕಿ ಸಂಘದ ಗೌರವಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿದರು. ರಾ?ಘವೇಂದ್ರ ಪ್ರಭು ನಿರೂಪಿಸಿದರು. ರಾಜೇಶ್ ಭಟ್ ವಂದಿಸಿದರು.






error: Content is protected !!
Scroll to Top