ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಭಾರಿ ಏರಿಕೆ



(ನ್ಯೂಸ್‌ ಕಡಬ) newskadaba.com,  ಸೆ. 30 ಬೆಂಗಳೂರು: ಈ ಬಾರಿ ಮೈಸೂರು ದಸರಾ  ನೋಡಲೆಂದು ಹೊರಟವರಿಗೆ ಕೆಎಸ್‌ಆರ್‌ಟಿಸಿ ಶಾಕ್‌ ನೀಡಿದೆ. ಬೆಂಗಳೂರು- ಮೈಸೂರು ಬಸ್​ ಟಿಕೆಟ್​ ದರ ಹೆಚ್ಚಳವಾಗಿದೆ. ಸಾಲು ಸಾಲಾಗಿ ರಜೆಗಳು ಬಂದಿರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಟಿಕೆಟ್‌ ಬೇಡಿಕೆ ಹತ್ತು ಪಟ್ಟು ಹೆಚ್ಚಿದೆ. ಹೀಗಾಗಿ ಕೆಎಸ್​​​ಆರ್​ಟಿಸಿ ಮಾತ್ರವಲ್ಲ, ಖಾಸಗಿ ಬಸ್​​ಗಳು ಕೂಡ ಹಬ್ಬವನ್ನೇ ನೆಪವಾಗಿ ಇಟ್ಟುಕೊಂಡು ಪ್ರಯಾಣ ದರ ಏರಿಕೆ ಮಾಡಿವೆ.







ಎಷ್ಟು ಏರಿಕೆ?

ಕೆಎಸ್ಆರ್ಟಿಸಿ ನಿಗಮ 20ರಿಂದ 30 ರುಪಾಯಿ ಟಿಕೆಟ್ ದರ ಹೆಚ್ಚಳ ಮಾಡಿದೆ. ಈ ಹಿಂದೆ ಕೆಎಸ್ಆರ್ಟಿಸಿ ಎಕ್ಸ್‌ಪ್ರೆಸ್‌ ಬಸ್‌ನಲ್ಲಿ ಬೆಂಗಳೂರು ಟು ಮೈಸೂರಿಗೆ 162 ರುಪಾಯಿ ಇತ್ತು. ಇದೀಗ 180 ರುಪಾಯಿ ಆಗಿದೆ. ನಾನ್ ಸ್ಟಾಪ್ ಬಸ್‌ನಲ್ಲಿ ಈ ಹಿಂದೆ- 210 ರುಪಾಯಿ ಇದ್ದದ್ದು ಈಗ 230 ರುಪಾಯಿಗೆ ಏರಿದೆ. ರಾಜಹಂಸ ಬಸ್‌ನಲ್ಲಿ ಈ ಹಿಂದೆ 250 ರುಪಾಯಿ ಇದ್ದದ್ದು ಇದೀಗ 280 ರುಪಾಯಿ ಆಗಿದೆ. ಎಲೆಕ್ಟ್ರಿಕ್ ಎಸಿ ಬಸ್ ಈ ಹಿಂದೆ 400 ರುಪಾಯಿ, ಇದೀಗ 420 ರುಪಾಯಿ. ಐರಾವತ ಕ್ಲಬ್ ಕ್ಲಾಸ್ ಈ ಹಿಂದೆ 430 ರುಪಾಯಿ, ಇದೀಗ 450 ರುಪಾಯಿ.






ಖಾಸಗಿ ಬಸ್​​​ ಬಸ್ ಟಿಕೆಟ್ ದರ ಏರಿಕೆ

ಬೆಂಗಳೂರಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ ಖಾಸಗಿ ಬಸ್​ ಪ್ರಯಾಣದರ 1000 ರೂಪಾಯಿ ಇರುತ್ತಿತ್ತು. ಆದೀಗ, 2039 ರೂಪಾಯಿ ಆಗಿದೆ. ಇನ್ನು, ದಾವಣಗೆರೆಗೆ ತೆರಳಲು 750 ರೂಪಾಯಿ ಟಿಕೆಟ್ ದರ ಇತ್ತು. ಈಗ 1489 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿಂದ ಬೆಳಗಾವಿಗೆ 1200 ರೂಪಾಯಿ ಇರುತ್ತಿದ್ದ ಬಸ್​ ಟಿಕೆಟ್ ದರ ಈಗ 2677 ರೂಪಾಯಿ ತನಕ ಏರಿಕೆ ಆಗಿದೆ. ಬೆಂಗಳೂರಿಂದ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 1200 ರೂಪಾಯಿ ಇರುತ್ತಿತ್ತು. ಈಗ, 1800 ರೂಪಾಯಿ ಆಗಿದೆ. ಇನ್ನು, ಬೆಂಗಳೂರಿಂದ ಕಲಬುರಗಿಗೆ 1100 ರೂ. ಇದ್ದ ಬಸ್​ ಟಿಕೆಟ್​ ದರ ಈಗ 2299 ರೂಪಾಯಿ ಆಗಿದೆ. ಬಸ್ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top