ದುಬೈ: ಒಂದು ವಿಕೆಟ್‌ ಕಿತ್ತು 2 ಪ್ರಮುಖ ದಾಖಲೆ ಬರೆದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ



(ನ್ಯೂಸ್‌ ಕಡಬ) newskadaba.com,  ಸೆ.22 ದುಬೈ : ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ ಸೂಪರ್‌-4 ಪಂದ್ಯದಲ್ಲಿ ಟೀಮ್‌ ಇಂಡಿಯಾ ಹಾರ್ದಿಕ್‌ ಪಾಂಡ್ಯ ಒಂದು ವಿಕೆಟ್‌ ಕಿತ್ತರೂ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ ಪರ ಅತ್ಯಧಿಕ ಟಿ20 ವಿಕೆಟ್‌ ಕಿತ್ತ 2ನೇ ಬೌಲರ್‌ ಎಂಬ ದಾಖಲೆ ಜತೆಗೆ ಏಷ್ಯಾಕಪ್‌ ಟಿ20ಯಲ್ಲಿ ಅತ್ಯಧಿಕ ವಿಕೆಟ್‌ ಪಡೆದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು.





ಭಾರತ ಪರ ಟಿ20ಯಲ್ಲಿ ಅತ್ಯಧಿಕ ವಿಕೆಟ್‌ ಪಡೆದ ದಾಖಲೆ ಅರ್ಶ್‌ದೀಪ್‌ ಸಿಂಗ್‌ ಹೆಸರಿನಲ್ಲಿದೆ. ಅವರು 100 ವಿಕೆಟ್‌ ಕಿತ್ತಿದ್ದಾರೆ. ಎರಡನೇ ಸ್ಥಾನದಲ್ಲಿರುವ ಹಾರ್ದಿಕ್‌ ಪಾಂಡ್ಯ 97 ವಿಕೆಟ್‌ ಉರುಳಿಸಿದ್ದಾರೆ. 96 ವಿಕೆಟ್‌ ಪಡೆದಿರುವ ಯಜುವೇಂದ್ರ ಚಹಲ್‌ ಮೂರನೇ ಸ್ಥಾನದಲ್ಲಿದ್ದಾರೆ.






ಏಷ್ಯಾಕಪ್‌ ಟಿ20 ಮಾದರಿಯಲ್ಲಿ ಹಾರ್ದಿಕ್‌ ಪಾಂಡ್ಯ 14 ವಿಕೆಟ್‌ ಕಲೆಹಾಕಿ ಶ್ರೀಲಂಕಾದ ವನಿಂದು ಹಸರಂಗ ಮತ್ತು ಅಫ್ಘಾನಿಸ್ತಾನ ರಶೀದ್‌ ಖಾನ್‌ ಜತೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಅಫ್ಘಾನ್‌ ಸೂಪರ್‌ 4 ನಿಂದ ಹೊರಬಿದ್ದಿರುವ ಕಾರಣ ಸದ್ಯ ಪಾಂಡ್ಯ ಮತ್ತು ಹಸರಂಗ ಮಧ್ಯೆ ಅಗ್ರಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

error: Content is protected !!
Scroll to Top