ರಾಜ್ಯ ಸರ್ಕಾರ ವು ಭಾರತ ರತ್ನ ಪ್ರಶಸ್ತಿ ಯನ್ನು ರಾಷ್ಟ್ರಕವಿ ಕುವೆಂಪುರವರಿಗೆ ಕೊಡಬೇಕು ಎಂಬ ಮನವಿ



(ನ್ಯೂಸ್‌ ಕಡಬ) newskadaba.com,  ಸೆ.16 ನಮ್ಮ ನಾಡಿನ ಸಾಕ್ಷಿ ಪ್ರಜ್ಞೆ, ಜಗದಗಲಕ್ಕೂ ಮನುಜ ಮತ ವಿಶ್ವಪಥ ಎಂಬ ಸಂದೇಶ ಸಾರಿದ ಮೇರುವ್ಯಕ್ತಿತ್ವದ ಜ್ಞಾನ ಶಿಖರ ರಾಷ್ಟ್ರಕವಿ ಕುವೆಂಪು ಅವರಿಗೆ ದೇಶ ಕೊಡ ಮಾಡುವ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಕೊಡಬೇಕು ಎಂಬ ಮನವಿಯನ್ನು ರಾಜ್ಯ ಸರ್ಕಾರ ಮಾಡಿದೆ. ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಶ್ಲಾಘನೀಯ ಹಾಗೂ ಕನ್ನಡಿಗರಿಗೆ ಹೆಮ್ಮೆಯ ವಿಷಯ.







ಇವರ ಅಮೂಲಾಗ್ರ ಬರಹ ಚಿಂತನೆಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಪಸರಿಸಿ ವಿಶ್ವವ್ಯಾಪಿಯಾಗಿಸಲು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ.






ನಮ್ಮ ಮಾತೃಭಾಷೆ ಕನ್ನಡಕ್ಕೆ ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಮೂಲಕ ಜ್ಞಾನಪೀಠ ಪುರಸ್ಕಾರ ದೊರಕಿಸಿಕೊಟ್ಟ ಪ್ರಥಮ ವ್ಯಕ್ತಿ ಕುವೆಂಪು. ‘ಕಾನೂರು ಹೆಗ್ಗಡತಿ’, ‘ಮಲೆ ಗಳಲ್ಲಿ ಮದುಮಗಳು’ ಎಂಬ ಸೊಗಸಾದ ಶ್ರೀಮಂತ ಕಾದಂಬರಿಗಳ ಮೂಲಕ ಇಡೀ ಭಾರತೀಯ ಸಾಹಿತ್ಯ ಲೋಕದಲ್ಲಿ ಎಂದಿಗೂ ಅಚ್ಚಳಿಯದೇ ಉಳಿದ ಮೇರು ಪ್ರತಿಭೆ.

ಇವರ ಆಶಯ ಹಾಗೂ ಮೌಲ್ಯಗಳು ಸರ್ವ ಕಾಲಕ್ಕೂ ಪ್ರಸ್ತುತ. ರಾಷ್ಟ್ರಕವಿ ಕುವೆಂಪು ಅವರಿಗೆ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗೆ ತಡವಾಗಿಯಾದರೂ ಶಿಫಾರಸು ಮಾಡಿದ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು. ಕೇಂದ್ರ ಸರ್ಕಾರವು ಅರ್ಹ ಹಾಗೂ ಯೋಗ್ಯ ರಾದ ಇವರನ್ನು ಗೌರವಿಸಿ, ಭಾರತ ರತ್ನ ಎಂದು ಘೋಷಿಸಲಿ ಎಂದು ಆಶಿಸುತ್ತೇನೆ

error: Content is protected !!
Scroll to Top