ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಕುರಿತು ಗಂಭೀರ ಚರ್ಚೆ



(ನ್ಯೂಸ್‌ ಕಡಬ) newskadaba.com,  ಸೆ.16 ಬಂಟ್ವಾಳ  : ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯು ಪುರಸಭಾ ಅಧ್ಯಕ್ಷ ವಾಸು ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸೋಮವಾರ(ಸೆ.15) ದಂದು ನಡೆಯಿತು.





ಸಾಮಾನ್ಯ ಸಭೆಯಲ್ಲಿ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಒಂದೇ ಒಂದು ಕಾನೂನು ಪ್ರಕಾರ ದಾಖಲೆಗಳು ಸಿಗುತ್ತಿಲ್ಲ. ಪುರಸಭೆಯ ಸದಸ್ಯರುಗಳಿಗೆ ಮರ್ಯಾದೆ ಇಲ್ಲವೇ? ನಾವೇನು ಕೆಲಸವಿಲ್ಲದೆ ಬಂದು ಇಲ್ಲಿ ಕುಳಿತುಕೊಂಡಿದ್ದೇವಾ? ಎಂದು ಅಧಿಕಾರಿಗಳಿಗೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭುರವರು ಪ್ರಶ್ನಿಸಿದರು.






ಘನತ್ಯಾಜ್ಯ ವಾಹನವೊಂದಕ್ಕೆ ಒಬ್ಬ ಡ್ರೈವರನ್ನು ನಿಯೋಜಿಸಿ ಆತನಿಗೆ ಫೆ.ಯಿಂದ ಜೂನ್ ವರೆಗೆ 94614 ರೂ ವೇತನ ಪಾವತಿ ಮಾಡಿದ ಬಗ್ಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು .ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಅಮೃತಯೋಜನೆಯಡಿ ಪೈಪ್ ಲೈನ್ ಹಾಕಲಾಗಿದೆ, ಆದರೆ ನೀರು ಬರುತ್ತಿಲ್ಲ. ಇದೀಗ ಮನೆಯ ಮಾಲೀಕರ ಆಧಾರ್ ಕಾರ್ಡ್ ಪಡೆದುಕೊಂಡು ಸಾವಿರಾರು ರೂ. ಬಿಲ್ ನೀಡಿ ಹೋಗುತ್ತಾರೆ. ಬಿಲ್ ಕಟ್ಟಿದವರಿಗೆ ಕುಡಿಯುವ ನೀರು ಇಲ್ಲ, ಬಿಲ್ ಕಟ್ಟದವರಿಗೆ ನೀರು ಹೋಗುತ್ತದೆ ಎಂದು ಆರೋಪ ಮಾಡಿದರು.

ಬಿಸಿರೋಡಿನ ಆಡಳಿತ ಸೌಧದ ಕಚೇರಿ ಮುಂಭಾಗದಲ್ಲಿ ಪಿಂಕ್ ಟಾಯ್ಲೆಟ್ ನನ್ನು ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಮಾಡಿಕೊಡಿ, ಕನಿಷ್ಠ ದರವನ್ನು ನಿಗದಿಪಡಿಸಿ ಎಂದು ಸದಸ್ಯರು ತಿಳಿಸಿದರು..ಸದಸ್ಯರುಗಳಾದ ಹರಿಪ್ರಸಾದ್, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು

error: Content is protected !!
Scroll to Top