ಉಡುಪಿ – ಹೂಡಿಕೆ ಹೆಸರಿನಲ್ಲಿ 1.32 ಕೋಟಿ ರೂ.- ಆನ್ಲೈನ್ ವಂಚನೆ



(ನ್ಯೂಸ್‌ ಕಡಬ) newskadaba.com,  ಸೆ. 4ಉಡುಪಿ : ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಕೋಟ್ಯಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆನ್ರಿ ಡಿ ಅಲ್ಮೇಡಾ(69) ಎಂಬವರು ಜು.19ರಂದು ಫೇಸ್‌ಬುಕ್‌ನಲ್ಲಿ ಇನ್ವೆಸ್ಟ್ ಮೆಂಟ್ ಟ್ರೇಡಿಂಗ್ ಮಾಡುವುದರ ಬಗ್ಗೆ ಜಾಹಿರಾತನ್ನು ನೋಡಿದ್ದು, ಅದನ್ನು ಕ್ಲಿಕ್ ಮಾಡಿದಾಗ ಲಿಂಕ್ ಓಪನ್ಆಗಿತ್ತು







 ಬಳಿಕ ಹೆನ್ರಿ ಅವರ ವಾಟ್ಸಾಪ್‌ಗೆ ಟ್ರೇಡಿಂಗ್ ಹೂಡಿಕೆ ಮಾಡುವಂತೆ ಸಂದೇಶ ಬಂದಿದ್ದು, ಅಂಕಿತಾ ಘೋಷ್ ಎಂಬಾತ ಕರೆ ಮಾಡಿ ಹೂಡಿಕೆ ಬಗ್ಗೆ ಮಾಹಿತಿ ತಿಳಿಸಿ ವಾಟ್ಸಾಪ್ ಗ್ರೂಪ್‌ಗಸೇರ್ಪಡೆ ಮಾಡಿದರು. ಗ್ರೂಪಿನಲ್ಲಿನ ವಿವಿಧ ನಂಬರ್‌ಗಳಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ಗಳಿಸಬಹುದು ಎಂಬ ಸಂದೇಶಗಳಿದ್ದು, ಅದನ್ನು ನಂಬಿದ ಹೆನ್ರಿ, ಜು.22ರಿಂದ ಸೆ.1ರವರೆಗೆ ಹಂತ ಹಂವಾಗಿ ಒಟ್ಟು 1,32,90,000 ರೂ. ಹಣವನ್ನು ಹೂಡಿಕೆ ಮಾಡಿದರು. ತದನಂತರ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ






error: Content is protected !!
Scroll to Top