Auto driver: ”ಕಾರು ಖರೀದಿಸುವಷ್ಟು ದುಡ್ಡಿಲ್ಲ, ಆಟೋ ಓಡಿಸುವುದರಲ್ಲಿಯೇ ಹ್ಯಾಪಿಯಾಗಿದ್ದೀನಿ”; ಸ್ಪೂರ್ತಿಯಾದ ಬೆಂಗಳೂರಿನ ಯುವತಿ!



(ನ್ಯೂಸ್‌ ಕಡಬ) newskadaba.com ಆ. 20  ಬೆಂಗಳೂರು: ದೇಶದ ಅನೇಕ ನಗರಗಳಲ್ಲಿ ಇನ್ನೂ ಆಟೋ ಓಡಿಸುವುದರಲ್ಲಿ ಪುರುಷರದ್ದೇ ಪ್ರಾಬಲ್ಯವಿದೆ. ಆದರೆ,ದಿನಕಳೆದಂತೆ ಮಹಿಳೆಯರು ಕೂಡಾ ಆಟೋ ಓಡಿಸಲು ಮುಂದೆ ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ, ಚಳಿ ಗಾಳಿಯ ನಡುವೆಯೂ ಆಟೋ ಓಡಿಸುವ ಯುವತಿಯೊಬ್ಬಳು ತನ್ನ ಧೈರ್ಯ, ಬದ್ಧತೆ ಹಾಗೂ ಚಾಲನಾ ಪ್ರೀತಿಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್  ಪ್ರಸಿದ್ಧಿ ಆಗಿದ್ದಾರೆ.







ಕಾರು ಖರೀದಿಸುವಷ್ಟು ದುಡ್ಡಿಲ್ಲದೆ, ಆಟೋ ಖರೀದಿಸಿದ್ದು, ಇದೀಗ ಆಟೋ ಓಡಿಸುವುದರಲ್ಲಿಯೇ ಖುಷಿಯಾಗಿದ್ದೀನಿ ಎಂದು ಹೇಳುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಆಕೆಯ ದೃಢ ನಿರ್ಧಾರ ಹಾಗೂ ಸಕಾರಾತ್ಮಕ ಚಿಂತನೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.






ಇತ್ತೀಚಿಗೆ ಆಟೋವೊಂದನ್ನು ಬುಕ್ ಮಾಡಿದ್ದ ಬೆಂಗಳೂರಿನ ನಿವಾಸಿ ತಮನ್ನಾ ತನ್ವೀರ್ ಅವರಿಗೆ ಮಹಿಳಾ ಆಟೋ ಡ್ರೈವರ್ ನೋಡಿ ಅಚ್ಚರಿಗೊಂಡಿದ್ದು, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿದ್ಯಾವಂತೆ ಹಾಗೂ ಇಂಗ್ಲೀಷ್ ನಲ್ಲಿ ಸ್ಪಷ್ಟತೆ ಇದ್ದರೂ ಯಾಕೆ ಆಟೋ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾರೆ ಎಂಬುದನ್ನು ಚಾಲಕಿ ಸಫುರಾ ವಿವರಿಸಿದ್ದಾರೆ.

 

error: Content is protected !!
Scroll to Top