ವಿದ್ಯಾರ್ಥಿ ಜೀವನದ ಗೋಲ್ಡನ್ ಲೈಫ್ ನ್ನು ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಬಳಕೆ ಮಾಡಿಕೊಳ್ಳಿರಿ- ಧರ್ಮಸ್ಥಳ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್ ಕರೆ



(ನ್ಯೂಸ್ ಕಡಬ) newskadaba.com ಕಡಬ, ಆ. 20. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಡಬ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆ ಟ್ರಸ್ಟ್ (ರಿ)ಕಡಬ ತಾಲೂಕು ವತಿಯಿಂದ ಕಡಬ ತಾಲೂಕು ಪ್ರೌಡಶಾಲೆ ಹಾಗೂ ಕಾಲೇಜುಗಳಲ್ಲಿ ನಡೆಸಲಾಗುವ 2025ರ ಸ್ವಾಸ್ಥ್ಶ ಸಂಕಲ್ಪ ಮಾಶಾಚರಣೆಯ ಉಧ್ಘಾಟನಾ ಕಾರ್ಯಕ್ರಮವು ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಸಭಾಂಗಣ ರಾಮಕುಂಜದಲ್ಲಿ ನಡೆಯಿತು..







 

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಮುಖ್ಶ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ರವರು ಮಾತನಾಡಿ, ವಿದ್ಯಾರ್ಥಿ ಜೀವನ ಮಾನವನ ಜೀವಿತಾವಧಿಯ ಅತ್ಶಂತ ಮಹತ್ತರವಾದ ಘಟ್ಟ. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಉತ್ತಮ ಸಂಸ್ಕಾರಯುತವಾದ ಜೀವನದ ಪಾಠವನ್ನು ಅರಿಯಲು ವಿದ್ಯಾರ್ಥಿ ಜೀವನವನ್ನು ಗೋಲ್ಡನ್ ಲೈಫ ನ್ನು ಅನುಭವಿಸಬೇಕು. ಈ ಗೋಲ್ಡನ್ ಲೈಫ್ ನಲ್ಲಿ ಶ್ರಮಪಟ್ಟು ವಿದ್ಯಾರ್ಜನೆ ಮಾಡಿದರೆ ಮುಂದಿನ ಜೀವಿತಾವಧಿಯೂ ಅತ್ಶಂತ ಸುಂದರವಾಗಿ ರೂಪುಗೊಳ್ಳುತ್ತದೆ. ಗೋಲ್ಡನ್ ಲೈಪ್ ನ್ನು ಮೋಜು ಮಸ್ತಿಗಾಗಿ ಉಪಯೋಗಿಸಿ ವ್ಶರ್ಥ ಮಾಡಿದರೆ ಜೀವನ ಪರ್ಯಂತ ಪರಿತಪಿಸುವಂತಾಗುತ್ತದೆ. ಯಾವುದೇ ದುಷ್ಚಟ ದುರಾಭ್ಯಾಸಗಳಿಗೆ ವಿಧ್ಶಾರ್ಥಿಗಳು ಬಲಿಯಾಗದೇ ಸಮಾಜದ ಸರ್ವಶ್ರೇಷ್ಟ ವ್ಶಕ್ತಿಯಾಗಿ ರೂಪುಗೊಳ್ಳುವಂತಾಗಲಿ ಎಂದು ಆಶಿಸಿದರು.






 

ಕಾರ್ಯಕ್ರಮವನ್ನು ಮಂಗಳೂರು ಲೋಕಸಭಾ ಮಾಜಿ ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲ್ ಉಧ್ಘಾಟಿಸಿ ವಿಧ್ಶಾರ್ಥಿಗಳ ಉಜ್ವಲ ಭವಿಶ್ಶಕ್ಕಾಗಿ ಶುಭ ಹಾರೈಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆಯ ಸಂಘಟನಾ ರಾಜ್ಶಧ್ಶಕ್ಷರಾದ ಶ್ರೀ ನಟರಾಜ್ ಬದಾಮಿಯವರು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಪ್ರಬಂಧಸ್ಪರ್ಧೆ ಹಾಗೂ ಭಾಷಣ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

 

ಕಾರ್ಯಕ್ರಮದ ವೇಧಿಕೆಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ವಸಂತ್ ಕುಮಾರ್, ಪ್ರೌಡಶಾಲೆಯ ಮುಖ್ಶ ಗುರುಗಳಾದ ಸತೀಶ್ ಭಟ್, ಗ್ರಾಮಪಂಚಾಯತ್ ಅಧ್ಶಕ್ಷರಾದ ಶ್ರೀಮತಿ ಸುಚೇತಾ ಬಿ,ಕುಕ್ಕೆ ಸುಬ್ರಹ್ಮಣ್ಶ ದೇವಸ್ಥಾನ ಆಡಳಿತ ಸಮಿತಿ ಸದಸ್ಯರಾದ ಅಜಿತ್ ಕುಮಾರ್ ಪಾಲೇರಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ದಿನೇಶ್ ಮೆದು ಉಪಸ್ಥಿತರಿದ್ದರು.

 

ತಾಲೂಕು ಜನಜಾಗೃತಿ ವೇಧಿಕೆ ಅಧ್ಶಕ್ಷರಾದ ಮಹೇಶ್ ಕೆ ಸವಣೂರು ಕಾರ್ಯಕ್ರಮದ ಅಧ್ಶಕ್ಷತೆ ವಹಿಸಿದ್ದರು. ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ವಿಧ್ಶಾರ್ಥಿಗಳಿಗೆ ಪ್ರತಿಜ್ಞಾ ವಿಧಿಗಳ ಬೋಧನೆ ಮಾಡಿದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ವಲಯ ಮೇಲ್ವೀಚಾರಕಿ ಶ್ರೀಮತಿ ಜಯಶ್ರೀ ವಂದಿಸಿದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಮಕುಂಜೇಶ್ವರ ಪ್ರೌಡಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಐದುನೂರಕ್ಕೂ ಹೆಚ್ಚು ವಿಧ್ಶಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

error: Content is protected !!
Scroll to Top