ಕಡಬ: ಕೊಣಾಜೆ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮ



(ನ್ಯೂಸ್ ಕಡಬ) newskadaba.com ಕಡಬ, ಆ. 20. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮವು ಕೋಣಾಜೆ ಶ್ರೀ ದುರ್ಗಾಂಬಿಕಾ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಒಕ್ಕೂಟದ ಸ್ಥಾಪಕ ಅಧ್ಶಕ್ಷರಾದ ಶಿವಪ್ಪ ಗೌಡ ಹಾಕೋಟೆಕಾನರವರು ಉಧ್ಘಾಟಿಸಿದರು.







 

ಒಕ್ಕೂಟದ ಉತ್ತಮ ಶ್ರೇಣಿಯೊಂದಿಗೆ ಗುಣಮಟ್ಟದಲ್ಲಿ ನಡೆಯುತ್ತಿರುವ ಓಂಕಾರ ಪ್ರಗತಿಬಂಧು ಸಂಘ ಹಾಗೂ ವನದುರ್ಗಾ ಸ್ವ-ಸಹಾಯ ಸಂಘಕ್ಕೆ ಸ್ಮರಣಿಕೆಯನ್ನು ವಿತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ಧೇಶಕ ಎ ಬಾಬುನಾಯ್ಕ ರವರು ಮಾತನಾಡಿ, ಧರ್ಮಸ್ಥಳ ಯೋಜನೆಯ ಸೌಲಭ್ಶಗಳನ್ನು ಪಡೆಯುವಲ್ಲಿ ಸಂಘದ ಗುಣಮಟ್ಟದ ಮೌಲ್ಯ ಮಾಪನ ವರದಿ ಗ್ರೇಡಿಂಗ್ ರಿಪೋರ್ಟ್ ಅತೀ ಅಗತ್ಶವಾಗಿದೆ. ರಾಷ್ಟ್ರೀಕತ ಬ್ಶಾಂಕಿನಿಂದ ಸಂಘಕ್ಕೆ ಸಿಗುವ ಆರ್ಥಿಕ ನೆರವಿಗೆ ಗ್ರೇಡಿಂಗ್ ವರದಿಯನ್ನು ಬ್ಯಾಂಕ್ ಪಡೆದುಕೊಳ್ಳುತ್ತದೆ. ವಾರ್ಷಿಕವಾಗಿ ಸಂಘಗಳ ಲೆಕ್ಕಪರಿಶೋಧನೆಯನ್ನು ತಂತ್ರಜ್ಞಾನದ ಮೂಲಕ ನಡೆಸಿ ಬ್ಶಾಂಕ್ ಗೆ ನೀಡಲಾಗುತ್ತದೆ ಆದ್ದರಿಂದ ಎಲ್ಲಾ ಸಂಘಗಳೂ ಉತ್ತಮ ಗ್ರೇಡಿಂಗ್ ನ್ನು  ಪಡೆಯುವಲ್ಲಿ ಸಮರ್ಥರಾಗಬೇಕು. ಯೋಜನೆಯ ವಿಶೇಷ ಸೌಲಭ್ಶಗಳ ಕುರಿತಾದ ಮಾಹಿತಿಯನ್ನು ಒಕ್ಕೂಟದ ತ್ರೈಮಾಸಿಕ ಸಭೆಗಳನ್ನು ನಡೆಸಿ ಚರ್ಚಿಸಬೇಕು ಎಂದರು.






 

ಕೊಣಾಜೆ ಒಕ್ಕೂಟದ 35 ಸಂಘಗಳಲ್ಲಿ ಕುಶಾಲಪ್ಪ ಗೌಡˌನಾರಾಯಣ ಗೌಡ ಸೀತಮ್ಮˌ ಪುಪ್ಪಾವತಿ ಹಾಗೂ ಪುಟ್ಟಣ್ಣ ಗೌಡರವರನ್ನು ಹಿರಿಯ ಸದಸ್ಯರೆಂದು ಗುರುತಿಸಿ ಗೌರವಿಸಲಾಯಿತು. ಒಕ್ಕೂಟದ ಸದಸ್ಯರಿಗೆ ರಂಗೋಳಿ ಸ್ಪರ್ಧೆˌ ಹೂಗುಚ್ಚ ತಯಾರಿ ಸ್ಪರ್ಧೆˌ ಬಲೂನ್ ಒಡೆಯುವ ಸ್ಪರ್ದೆ ಹಾಗೂ ಸಂಗೀತ ಕುರ್ಚಿಯನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಶಕ್ಷರಾದ ಡೀಕಯ್ಯ ಗೌಡ ಹಾಕೋಟೆಕಾನ ರವರು ವಹಿಸಿದ್ದರು.

 

ಕಾರ್ಯಕ್ರಮದ ವೇದಿಕೆಯಲ್ಲಿ ಕಡಬ ತಾಲೂಕು ಕೇಂದ್ರ ಒಕ್ಕೂಟ ಸಮಿತಿಯ ಅಧ್ಯಕ್ಷ ಸಂತೋಷ್ ಕೇನ್ಯ, ತಾಲೂಕು ಪ್ರಕಾಶ್ ಕುಮಾರ್,ˌಕೊಣಾಜೆ ಗ್ರಾಮಪಂಚಾಯತ್ ಅಧ್ಶಕ್ಷೆ ರುಕ್ಮಿಣಿˌ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರುಗಳಾದ ಮುಚ್ಚಿರೋಡಿˌರಘುಚಂದ್ರ ಮನೆಜಾಲುˌ ಬಾಸ್ಕರಗೌಡ ದೊಡ್ಡಮನೆ ಉಪಸ್ಥಿತರಿದ್ದರು.

 

ಒಕ್ಕೂಟದ ಕಾರ್ಯದರ್ಶಿ ವೆಂಕಟ್ರಮಣ ಗೌಡ ಒಕ್ಕೂಟದ ಸಾಧನಾ ವರದಿ ವಾಚಿಸಿದರು. ಕೊಣಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಬೇಬಿ ಸ್ವಾಗತಿಸಿ ನಿಕಟಪೂರ್ವ ಕಾರ್ಯದರ್ಶಿ ಮುತ್ತಪ್ಪ ಗೌಡ ಧನ್ಯವಾದ ನೀಡಿದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top