ಅಕ್ರಮ ಕೆಂಪುಕಲ್ಲು ಸಾಗಾಟ ಆರೋಪ- ಟಿಪ್ಪರ್ ವಶಕ್ಕೆ

crime, arrest, suspected


(ನ್ಯೂಸ್ ಕಡಬ) newskadaba.com ಆ. 18. ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಉಡುಪಿ ನಗರ ಪೊಲೀಸರು 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಸ್ಥಾನದ ಬಳಿ ವಶಪಡಿಸಿಕೊಂಡಿರುವ ಕುರಿತು ವರದಿಯಾಗಿದೆ.





ಅಲೆವೂರು ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ 15,750 ರೂ. ಮೌಲ್ಯದ ಸುಮಾರು 350 ಕೆಂಪುಕಲ್ಲು ಇರುವುದು ಕಂಡುಬಂದಿದ್ದು, ಇದನ್ನು ಮಂಚಿಕೇರಿ ಎಂಬಲ್ಲಿಂದ ಕಳವು ಮಾಡಿ ಸಾಗಾಟ ಮಾಡಲಾಗುತ್ತಿತ್ತೆನ್ನಲಾಗಿದೆ.






ಘಟನಾ ಸಂಬಂಧ ವಾಹನ ಚಾಲಕ ಮತ್ತು ವಾಹನ ಮಾಲಕನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top