(ನ್ಯೂಸ್ ಕಡಬ) newskadaba.com ಕಡಬ, ಆ. 18. ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ನ ಎದುರು ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಹಾಗಣಪತಿ ಬಿಲ್ಡಿಂಗ್ ನಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜನರ ವಿಶ್ವಾಸಕ್ಕೆ ಪಾತ್ರವಾಗಿರುವ ಜ್ಞಾನಸುಧಾ ವಿದ್ಯಾಲಯದಲ್ಲಿ ಮೊಂಟೆಸ್ಸರಿ ಶಿಕ್ಷಣವನ್ನು ಒದಗಿಸಲಾಗುತ್ತಿದೆ.

ಪ್ರತಿವರ್ಷವೂ ಈ ವಿದ್ಯಾ ಕೇಂದ್ರದಲ್ಲಿ ಮೊಂಟೆಸ್ಸರಿ ತರಬೇತಿ ಪಡೆಯುವ ಶಿಕ್ಷಣಾರ್ಥಿಗಳು ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆಗೊಂಡು ಸಂಸ್ಥೆಗೆ 100% ಫಲಿತಾಂಶ ನೀಡುವ ಮೂಲಕ ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಸರಕಾರದ ನಿರುದ್ಯೋಗ ನಿರ್ಮೂಲನಾ ಏಜೆನ್ಸಿಯಾಗಿರುವ ಭಾರತ್ ಸೇವಾ ಸಮಾಜದ ವತಿಯಿಂದ ತರಬೇತಿಯನ್ನು ನಡೆಸಲಾಗುತ್ತಿದ್ದು, ಈ ಸಂಸ್ಥೆಯ ಮೂಲಕ ತರಬೇತಿ ಪಡೆದವರು ಒಂದು ವರ್ಷದಲ್ಲಿ ಮಗುವಿಗೆ ಬೇಕಾದ ಎಲ್ಲಾ ಅಂಶಗಳನ್ನು ಪೂರ್ವ ಪ್ರಾಥಮಿಕ ಹಂತದಲ್ಲಿ ಬೆಳಸಲು ಸಹಕರಿಯಾಗಬಲ್ಲ ಶಿಕ್ಷಣವನ್ನು ಹೇಗೆ ನೀಡಬಹುದು ಎಂಬುದನ್ನು ಕಲಿಸಿಕೊಡುವ ಮೂಲಕ ಉತ್ತಮ ಶಿಕ್ಷಕಿಯರನ್ನು ರೂಪಿಸುತ್ತಿದೆ.
ಹಾಗೆಯೇ ಈ ವಿದ್ಯಾಲಯದಲ್ಲಿ LKG ಯಿಂದ SSLC ವರೆಗೆ ಎಲ್ಲಾ ವಿಷಯಗಳಿಗೆ ಪ್ರತ್ಯೇಕವಾಗಿ ಸ್ನಾತ್ತಕೋತ್ತರ ಪದವಿ ಪಡೆದ ಅನುಭವಿ ಶಿಕ್ಷಕರಿಂದ ಕೋಚಿಂಗ್ (ಟ್ಯೂಷನ್) ನೀಡಲಾಗುವುದು. ಜೊತೆಗೆ 8 ಮತ್ತು 9ನೇ ತರಗತಿಯಲ್ಲಿ ಅನುತ್ತೀರ್ಣರಾದವರು ನೇರವಾಗಿ ಖಾಸಗಿ ಅಭ್ಯರ್ಥಿಗಳಾಗಿ 10ನೇ ತರಗತಿ ಪರೀಕ್ಷೆ, ಪ್ರಥಮ ಪಿಯುಸಿ ಅನುತ್ತೀರ್ಣರಾದವರು ಧ್ವಿತೀಯ ಪಿಯುಸಿ’ಗೆ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಬಂದಿರುತ್ತದೆ.
ಮಕ್ಕಳ ಕಲಿಕೆಗೆ ಹೊಸ ದಾರಿ ಮೊಂಟೆಸ್ಸರಿ ಶಿಕ್ಷಣವಾಗಿದ್ದು, ಇಂತಹ ಮೊಂಟೆಸ್ಸರಿ ಶಿಕ್ಷಕಿಯರನ್ನು ಈ ಜ್ಞಾನಸುಧಾ ತರಬೇತಿ ಸಂಸ್ಥೆಯು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಂಚಾಲಕರಾದ ಬಿ. ಎಲ್ ಜನಾರ್ಧನ ಅವರನ್ನು 94812 29381 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.









