ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ► ವಿದ್ಯುತ್, ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ



(ನ್ಯೂಸ್ ಕಡಬ) newskadaba.com ಕಡಬ, ಎ.15. ಭಾನುವಾರ ಸಂಜೆ ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ.







ಪರಿಸರದ ಸುಬ್ರಹ್ಮಣ್ಯ, ಕೈಕಂಬ, ಬಿಳಿನೆಲೆ, ನೆಟ್ಟಣ, ಮರ್ಧಾಳ, ಕೊಣಾಜೆ, ಕೋಡಿಂಬಾಳ, ಪಂಜ, ಇಚಿಲಂಪಾಡಿ, ನೆಲ್ಯಾಡಿ, ಹೊಸ್ಮಠ, ಬಲ್ಯ, ಕುಂತೂರು, ಆಲಂಕಾರು ಸೇರಿದಂತೆ ವಿವಿಧೆಡೆ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದೆ. ವಿದ್ಯುತ್ ಕೈಕೊಟ್ಟಿದ್ದರಿಂದಾಗಿ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಸುಬ್ರಹ್ಮಣ್ಯದ ಬಳ್ಪ, ಗುತ್ತಿಗಾರು ಸೇರಿದಂತೆ ವಿವಿಧೆಡೆ ಭಾನುವಾರ ಬೆಳಗ್ಗಿನ ಜಾವ ಬಹುತೇಕ ಮಳೆಯಾಗಿತ್ತು. ಕಡಬ ಪರಿಸರದಲ್ಲಿ ಶನಿವಾರ ರಾತ್ರಿಯೂ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದಿದ್ದ ಭೂಮಿಗೆ ತಂಪೆರೆದಿದೆ.






error: Content is protected !!
Scroll to Top