(ನ್ಯೂಸ್ ಕಡಬ) newskadaba.com, ಆ.07: ಧರ್ಮಸ್ಥಳದಲ್ಲಿ ಅನುಮಾನಾಸ್ಪದ ಸಾವುಗಳ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಇಂದು 13ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಸಲಿದ್ದಾರೆ.ಈ ಮೊದಲು ಬಂಗ್ಲಗುಡ್ಡದಲ್ಲಿ ತಾನು ತೋರಿಸಿದ್ದ ಜಾಗ ಹೊರತುಪಡಿಸಿ ಮತ್ತೊಂದು ಸ್ಥಳಕ್ಕೆ ಎಸ್‌ಐಟಿ ಅಧಿಕಾರಿಗಳನ್ನು ಅನಾಮಧೇಯ ವ್ಯಕ್ತಿ ಕರೆದುಕೊಂಡು ಹೋಗಿದ್ದರು.
ಅಲ್ಲಿ ಭೂಮಿಯ ಮೇಲ್ಭಾಗದಲ್ಲೇ ಹಲವಾರು ಅಸ್ಥಿಗಳು ದೊರೆತ್ತಿದ್ದವು ಅವುಗಳನ್ನು ಜಪ್ತಿ ಮಾಡಿರುವ ಎಸ್‌ಐಟಿ ಅಧಿಕಾರಿಗಳು ಬಹುಶಃ ಬಂಗ್ಲಗುಡ್ಡದ ಮೇಲೆ ಆತಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿರಬಹುದು, ಹೀಗಾಗಿ ಭೂಮಿಯ ಮೇಲ್ಭಾಗದಲ್ಲಿ ಸಿಕ್ಕಿರುವ ಅಸ್ತಿಗಳ ಕುರಿತು ತನಿಖೆ ನಡೆಸಬೇಕೆ? ಬೇಡವೇ? ಎಂಬ ಗೊಂದಲದಲ್ಲಿ ಎಸ್‌ಐಟಿ ಅಧಿಕಾರಿಗಳು ಇದ್ದಾರೆ.
ಇದರ ನಡುವೆ 13ನೇ ಪಾಯಿಂಟ್‌ನಲ್ಲಿ ಬಹುತೇಕ ಕೊನೆಯ ಹಂತದ ಕಾರ್ಯಚರಣೆ ನಡೆಸಲಾಗುತ್ತಿದೆ. 13ನೇ ಪಾಯಿಂಟ್‌ನಲ್ಲಿ ಶವಗಳು ಸಿಕ್ಕೇ ಸಿಗುತ್ತವೆ ಎಂದು ಸುಜಾತಭಟ್ ಅವರ ವಕೀಲ, ಮಂಜುನಾಥ್ ಹೇಳಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.








