‘ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನ ಮರುಬಳಸಬಾರದು’- ಆರೋಗ್ಯ ಇಲಾಖೆ ಸೂಚನೆ



(ನ್ಯೂಸ್ ಕಡಬ) newskadaba.com, ಜು. 31: ಅಡುಗೆ ಎಣ್ಣೆ ಮರುಬಳಕೆ ಮಾಡುತ್ತಿರುವ ಮಾಹಿತಿ ಬೆನ್ನಲ್ಲೇ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಸದಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.





ಎಣ್ಣೆ ಉದ್ದಿಮೆದಾರರು ಹಾಗೂ ಬೇಕರಿ, ಹೋಟೆಲ್‌ನವರಿಗೆ ಖಡಕ್ ನಿರ್ದೇಶನ ಹೊರಡಿಸಿದ್ದಾರೆ. ಈ ಮೂಲಕ ಅಡುಗೆ ಎಣ್ಣೆ ತಯಾರಿಕಾ ಘಟಕದವರು ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಗುಣಮಟ್ಟ ವಿಶ್ಲೇಷಣೆ ತಪಾಸಣೆ ಮಾಡಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.






ರಾಜ್ಯದಲ್ಲಿ ಹೆಚ್ಚಾದ ಹೃದಯಘಾತ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕೆಲ ಅಡುಗೆ ಎಣ್ಣೆಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವಾಗಿ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕುರಿತು ತಜ್ಞರ ಜೊತೆ ಪರಾಮರ್ಶಿಸಿ ಆಹಾರ ಸುರಕ್ಷತಾ ಇಲಾಖೆಯಿಂದ ಸೂಚನೆ ನೀಡಿದೆ. ಸದ್ಯ 32,68,999 ಲೀಟರ್ ಬಳಕೆ ಮಾಡಿದ ಎಣ್ಣೆಯಿದ್ದು, ಸೂಕ್ತ ವಿಲೇವಾರಿ ಹಾಗೂ ಬಯೋ ಡಿಸೇಲ್ ಘಟಕಕ್ಕೆ ರವಾನಿಸುವಂತೆ ಹೇಳಿದೆ.

error: Content is protected !!
Scroll to Top