(ನ್ಯೂಸ್ ಕಡಬ) newskadaba.com, ಜು. 29. ಧರ್ಮಸ್ಥಳದಲ್ಲಿ ನಾರೂರು ಶವ ಹೂತಿಟ್ಟ ಪ್ರಕರಣದ ತನಿಖೆ ಹಂತ ಹಂತಕ್ಕೂ ತೀವ್ರ ಕುತೂಹಲ ಹೆಚ್ಚಿಸುತ್ತಿದೆ. ಕರ್ನಾಟಕ ಸೇರಿದಂತೆ ಇದೀ ದೇಶವೇ ಇದೀಗ ಎಸ್ಐಟಿ ತನಿಖೆ ಮೇಲೆ ಕಣ್ಣಿಟ್ಟಿದೆ. ಮುಸುಕುಧಾರಿ ದೂರುದಾರ ಮೊದಲ ದಿನ ಮಹಜರಿನಲ್ಲಿ 13 ಸಮಾಧಿ ಸ್ಥಳಗಳನ್ನು ಗುರುತಿಸಿದ್ದ. ಈ ಪೈಕಿ ಮೊದಲ ಸಮಾಧಿಯನ್ನು ಎಸ್ಐಟಿ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಅಗೆಯಲಾಗಿದೆ. 4 ಅಡಿ ಅಗೆದರೂ ಯಾವುದೇ ಕಳೇಬರದ ಸುಳಿವಿಲ್ಲ. ಹೀಗಾಗಿ ಇದೀಗ 2ನೇ ಸಮಾಧಿ ಅಗೆಯುವ ಕಾರ್ಯ ಆರಂಭಗೊಂಡಿದೆ.
ದೂರುದಾರ ಗುರುತಿಸಿದ ಮೊದಲ ಸಮಾಧಿ ಸ್ಥಳ ನೇತ್ರಾವತಿ ಸ್ನಾನಘಟ್ಟ ಪಕ್ಕದಲ್ಲೇ ಇದೆ. ಮೊದಲ ಸಮಾಧಿ ಸ್ಥಳವನ್ನು ಅಗೆಯಲಾಗಿದೆ. ಭಾರಿ ಮಳೆ ನಡುವೆ ಸಮಾಧಿ ಸ್ಥಳ ಅಗೆಯಲಾಗಿದೆ. 4 ಅಡಿಗಿಂತ ಹೆಚ್ಚು ಸಮಾಧಿ ಸ್ಥಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಕೇಳಬೇರದ ಸುಳಿವು ಸಿಕಿಲ್ಲ. ಭಾರಿ ಮಳೆ ಕಾರಣ ಅಗೆದ ಜಾಗದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಸದ್ಯಕ್ಕೆ ಮೊದಲ ಸಮಾಧಿ ಸ್ಥಳ ಅಗೆತ ನಿಲ್ಲಿಸಲಾಗಿದೆ. ದೂರುದಾರ ಮತ್ತಷ್ಟು ಅಗೆಯಲು ಹೇಳಿದರೆ ಅಗೆಯಲಾಗುತ್ತದೆ. ಮಳೆ ಹಾಗೂ ನೀರಿನ ಒರತೆಯಿಂದ ಸಮಾಧಿ ಅಗೆದ ಸ್ಥಳದಲ್ಲಿ ನೀರು ತುಂಬಿಕೊಂಡಿದೆ.









