7 ದಿನ, 170 ಗಂಟೆ ಭರತನಾಟ್ಯ – ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಮಂಗಳೂರಿನ ರೆಮೋನಾ ಪಿರೇರಾ



(ನ್ಯೂಸ್ ಕಡಬ) newskadaba.com, ಜು. 29. ಮಂಗಳೂರು: ಪ್ರಧಾನಮಂತ್ರಿ ಬಾಲ ಪುರಸ್ಕಾರ ಪುರಸ್ಕೃತೆ ಮಂಗಳೂರಿನ ಸಂತ ಅಲೋಶಿಯನ್ ಕಾಲೇಜಿನ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ರೆಮೋನಾ ಎವೆಟ್ಟೆ ಪಿರೇರಾ 7 ದಿನಗಳ ಕಾಲ 170 ಗಂಟೆ ಭರತನಾಟ್ಯ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.







ಜುಲೈ 21 ರಂದು ಬೆಳಗ್ಗೆ 10:30ರಿಂದ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದು, ಜು.28ರಂದು ಮುಕ್ತಾಯವಾಗಿದೆ. ಈ ಏಳು ದಿನಗಳಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ಮಾಡಿದ್ದು, ಪ್ರದರ್ಶನದ ಪ್ರತಿ ದಿನ ರಾತ್ರಿ ಒಂದು ಗಂಟೆ ಹಾಗೂ ಮೂರು ಗಂಟೆಗೊಮ್ಮೆ 15 ನಿಮಿಷಗಳ ಕಾಲ ಮಾತ್ರ ವಿರಾಮ ಇರಲಿದೆ. ಈ ಸಮಯದಲ್ಲಿ ಕನಿಷ್ಟ ಪ್ರಮಾಣದ ಆಹಾರ ಸೇವಿಸುತ್ತಾಳೆ ರೆಮೋನಾ. ನಿರಂತರ ವೈದ್ಯರ ಸಲಹೆ, ಫಿಸಿಯೋಥೆರಪಿ ಆರೈಕೆಯೊಂದಿಗೆ ಈ ಪ್ರದರ್ಶನ ನಡೆಸಿದ್ದಾಳೆ.






error: Content is protected !!
Scroll to Top