(ನ್ಯೂಸ್ ಕಡಬ) newskadaba.com ಜು. 24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಲ್ಯ ಗ್ರಾಮದ ಸನ್ನಿದಿ ಪ್ರಗತಿಬಂಧು ತಂಡದ ಸದಸ್ಯರಾದ ಯಾದವ ರವರಿಗೆ ಕ್ರಿಟಿಕಲ್ ಇನ್ಲೇಸ್ ಯೋಜನೆಯಡಿಯಲ್ಲಿ ರೂ. 25,000 ಸಹಾಧನವನ್ನು ಆರೋಗ್ಯ ಸುಧಾರಣೆಗಾಗಿ ವಿತರಿಸಿ ಸಾಂತ್ವನ ತಿಳಿಸಲಾಯಿತು.
ಬಲ್ಯ ಗ್ರಾಮದ ಯಾದವರವರು ಕೆಲಸ ಮಾಡುವ ಸಂದರ್ಭ ಆಕಸ್ಮಿಕವಾಗಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು ಸೊಂಟದ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ದುರ್ಗಾವತಿ ಹಾಗೂ ಮೇಲ್ವೀಚಾರಕ ವಿಜೇಶ್ ಜೈನ್ ರವರ ಮನವಿಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕ್ರಿಟಿಕಲ್ ಇನ್ಲೇಸ್ ನಡಿಯಲ್ಲಿ ಪೂಜ್ಯರು ಮಂಜೂರು ಮಾಡಿದ ರೂ. 25,000 ಸಹಾಯಧನದ ಮಂಜೂರಾತಿ ಪತ್ರವನ್ನು ದಕ್ಷಿಣ ಕನ್ನಡ 02 ಪುತ್ತೂರು ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕರವರು ಫಲಾನುಭವಿ ಯಾದವ ರವರಿಗೆ ವಿತರಿಸಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ, ತಾಲೂಕು ವೀಕ್ಷಣಾಧಿಕಾರಿ ಶ್ರೀಮತಿ ಶೀಲಾವತಿ ಹಾಗೂ ಯಾದವರವರ ತಾಯಿ ಮತ್ತು ಪತ್ನಿ ಉಪಸ್ಥಿತರಿದ್ದರು.









