(ನ್ಯೂಸ್ ಕಡಬ) newskadaba.com ಮಂಗಳೂರು, ಜು. 23. 2025ನೇ ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕೇಂದ್ರ ಸರಕಾರದ ವತಿಯಿಂದ ನ್ಯಾಷನಲ್ ಇ-ಸ್ಕಾಲರ್ ಶಿಪ್ ಯೋಜನೆಯಡಿ, ಪ್ರಿ ಮೆಟ್ರಿಕ್ ಟಾಪ್, ಟಾಪ್ ಕ್ಲಾಸ್, ಪೋಸ್ಟ್ ಮೆಟ್ರಿಕ್ ವಿಕಲಚೇತನ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಮುಖಾಂತರ ಯೋಜನೆಗೆ ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ https://scholarships.gov.in ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಿ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ. ಪೋಸ್ಟ್ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿದ್ಯಾರ್ಥಿಗಳಿಗೆ ಅಕ್ಟೋಬರ್ 31ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಎಂ.ಆರ್ ಡಬ್ಲ್ಯೂಗಳಾದ ಮಂಗಳೂರು ತಾಲೂಕಿನ ಜಯಪ್ರಕಾಶ್ – 9110897458, ಬಂಟ್ವಾಳ ತಾಲೂಕಿನ ಗೀರೀಶ್ – 9164645616, ಪುತ್ತೂರು ತಾಲೂಕಿನ ನವೀನ್ – 9686682251, ಸುಳ್ಯ ತಾಲೂಕಿನ ಚಂದ್ರಶೇಖರ- 815300057, ಬೆಳ್ತಂಗಡಿ ತಾಲೂಕಿನ ಜಾನ್ – 7975199473 ಹಾಗೂ ಇಲಾಖೆ – 0824-2455999, ದೂರವಾಣಿ ಸಂಖ್ಯೆಗೆ ಅಥವಾ ಇಲಾಖೆಯ ವೆಬ್ಸೈಟ್ www.disabilityaffairs.gov.in ನಲ್ಲಿ ಭೇಟಿ ನೀಡಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಿಕಲಚೇತನ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್: ಅರ್ಜಿ ಆಹ್ವಾನ









