ಜಿ.ಟಿ.ಟಿ.ಸಿ: ಪ.ಜಾ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ಜಿ.ಟಿ.ಟಿ.ಸಿ ಮಂಗಳೂರು ಕೇಂದ್ರದಲ್ಲಿ 2025-26ನೆ ಸಾಲಿನ “ತಂತ್ರಜ್ಞಾನ ತರಬೇತಿ ಸಂಸ್ಥೆಗಳ ನೆರವು ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ” ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಸಿ.ಎನ್.ಸಿ. ಪ್ರೋಗ್ರಾಮರ್, ಲೇತ್ ಆಪರೇಟರ್, ಮಿಲ್ಲಿಂಗ್ ಮೆಶಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಆಪರೇಟರ್, ಮೆಕಾನಿಕಲ್ ಡಿಸೈನರ್ 4 ತಿಂಗಳ ಸರ್ಟಿಫಿಕೆಟ್ ಕೋರ್ಸ್‍ ಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ.







ಈ ಕೋರ್ಸ್‍ಗೆ 10 ನೇ ತರಗತಿ ಪಾಸ್ ಅಥವಾ ಐಟಿಐ ಪಾಸ್/ಫೇಲ್ ಅಥವಾ ಡಿಪ್ಲೊಮಾ ಪಾಸ್/ಫೇಲ್ ಹಾಗೂ ಇಂಜಿನಿಯರಿಂಗ್ ಪಾಸ್/ಫೇಲ್ ಆದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋರ್ಸ್‍ ಗಳು ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.2500 ಸ್ಟೈಫಂಡ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಜಿ.ಟಿ.ಟಿ.ಸಿ ಕೇಂದ್ರವನ್ನು (ದೂ.ಸಂ : 8073208137, 7899070548, 9481265587)  ಸಂಪರ್ಕಿಸಬಹುದು ಎಂದು  ಜಿ.ಟಿ.ಟಿ.ಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top