ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ: 1 ತಿಂಗಳಲ್ಲಿ e-KYC ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದು…!

(ನ್ಯೂಸ್ ಕಡಬ) newskadaba.com ಜು. 19. ರಾಜ್ಯದಲ್ಲಿ ಪಡಿತರ ಚೀಟಿದಾರರು ಇ- ಕೆವೈಸಿಯನ್ನು ಆದಷ್ಟು ಬೇಗನೆ ಮಾಡಿಸಬೇಕು. ಮಾಡಿಸದಿದ್ದರೆ ಅಂತಹ ಸದಸ್ಯರ ಪಡಿತರ ಕಾರ್ಡ್ ರದ್ದು ಪಡಿಸಲಾಗುವುದು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಸೂಚನೆ ನೀಡಿದ್ದಾರೆ.

ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು ಅವರು, ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಒಂದು ತಿಂಗಳು ಕಾಲಾವಕಾಶ ನೀಡಬೇಕು. ಆಗಲೂ ಇ-ಕೆವೈಸಿ ಮಾಡಿಸದೆ ಇದ್ದರೆ ಅಂತಹ ಸದಸ್ಯರ ಪಡಿತರ ಕಾರ್ಡ್ ರದ್ದು ಪಡಿಸುವ ಎಚ್ಚರಿಕೆ ನೀಡಿಬೇಕು. ಬಾಕಿ ಇರುವ ಇ-ಕೆವೈಸಿ ಪ್ರಕ್ರಿಯೆಗಳು ವಿಳಂಬವಿಲ್ಲದೆ ಪೂರ್ಣಗೊಳ್ಳುವಂತೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಅನಗತ್ಯವಾಗಿ ಕಾರ್ಡುಗಳು ವಿತರಣೆ ಆದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಬೇಕಿರುವ ವಾಹನ ಸೌಲಭ್ಯ ಹಾಗೂ ಕಾನೂನು ಮಾಪನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

Scroll to Top