(ನ್ಯೂಸ್ ಕಡಬ) newskadaba.com, ಜು. 10. ಬೆಂಗಳೂರು: ಕಾರ್ಖಾನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ ಮೂವರು ಆರೋಪಿಗಳನ್ನು ಕಗ್ಗಲಿಪುರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮೊಹ್ಸಿನ್ ಪಾಷಾ (27) ಹಲ್ಲೆಗೊಳಗಾದ ವ್ಯಕ್ತಿ. ಬಂಧಿತರನ್ನು ಇರ್ಫಾನ್, ರಿಜ್ವಾನ್ ಮತ್ತು ಮುಝುದ್ದೀನ್ ಖಾನ್ ಎಂದು ಗುರ್ತಿಸಲಾಗಿದೆ. ಮೂವರು ಆರೋಪಿಗಳು ಕೆಂಗೇರಿ ನಿವಾಸಿಗಳಾಗಿದ್ದಾರೆಂದು ತಿಳಿದುಬಂದಿದೆ.
ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆಹಾರ ತರಲು ಹೊರ ಹೋಗಿದ್ದಾಗ ಸೋಮವಾರ ರಾತ್ರಿ 10.30 ರಿಂದ 10.40 ರ ನಡುವೆ ಘಟನೆ ನಡೆದಿದೆ.
ಕೆಂಗೇರಿ ಬಳಿಯ ತಗಚಕುಪ್ಪೆ ಗ್ರಾಮದ ಪಿಂಟೂ ಬಾರ್ ಬಳಿ ಆರೋಪಿಗಳು ವ್ಯಕ್ತಿ ಮೇಲೆ ದಾಳಿ ನಡೆಸಿದ್ದು, ಜೇಬಿನಲ್ಲಿದ್ದ ಹಣ ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿ ಪರಾರಿಯಾಗಿದ್ದಾರೆ.













