ವಡೋದರಾದಲ್ಲಿ ಸೇತುವೆ ಕುಸಿತ: ಹಲವು ವಾಹನಗಳು ನದಿಗೆ- ಮೂವರು ಸಾವು



(ನ್ಯೂಸ್ ಕಡಬ) newskadaba.com, ಜು. 09. ಗುಜರಾತ್‌ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಗಂಭೀರ ಸೇತುವೆ ಕುಸಿದು ಬಿದ್ದು ಐದು ವಾಹನಗಳು ಮಹಿಸಾಗರ್‌ ನದಿಗೆ ಬಿದ್ದ ಘಟನೆ ನಡೆದಿದೆ.







ಇಂದು ಬೆಳಗ್ಗೆ 7:45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನಗಳು ಕೆಳಗೆ ಬಿದ್ದಿದೆ. ವಾಹನಗಳಿಂದ ಮೂವರನ್ನು ರಕ್ಷಿಸಲಾಗಿದ್ದು ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.






45 ವರ್ಷದ ಹಳೆಯ ಸೇತುವೆ ಇದಾಗಿದ್ದು ಬಹಳ ಹಿಂದಿನಿಂದಲೂ ಅಪಾಯಕಾರಿ ಸ್ಥಿತಿಯಲ್ಲಿತ್ತು. ಅದರ ಶಿಥಿಲಾವಸ್ಥೆಯ ಬಗ್ಗೆ ಸ್ಥಳೀಯರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ತುರ್ತು ದುರಸ್ತಿ ಅಥವಾ ಹೊಸ ರಚನೆಗಾಗಿ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ

error: Content is protected !!
Scroll to Top