(ನ್ಯೂಸ್ ಕಡಬ) newskadaba.com ಕಡಬ, ಜು.06. ಹಿಟಾಚಿಯನ್ನು ಲೋಡ್ ಮಾಡಿ ನಿಲ್ಲಿಸಲಾಗಿದ್ದ ಟಿಪ್ಪರ್ ನಿಂದ ಬ್ಯಾಟರಿ, ಟೂಲ್ಸ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಬಿಳಿನೆಲೆಯ ಶಿವದೇವ್ ಸಂಸ್ಥೆಗೆ ಸೇರಿದ ಟಿಪ್ಪರ್ ಹಾಗೂ ಹಿಟಾಚಿಯನ್ನು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೈದಾನದಲ್ಲಿ ಗುರುವಾರ ರಾತ್ರಿ ನಿಲ್ಲಿಸಲಾಗಿತ್ತು.
ಈ ವೇಳೆ ಕೈಚಳಕ ತೋರಿಸಿರುವ ಕಳ್ಳರು
ಟಿಪ್ಪರ್ ನಲ್ಲಿದ್ದ ಎರಡು ಬ್ಯಾಟರಿ, ಸುಮಾರು 60 ಲೀಟರ್ ಡೀಸೆಲ್, ವಾಹನದ ಲೈಟ್ಗಳು, ಜಾಕ್ ಸೇರಿದಂತೆ ಟೂಲ್ಸ್ ಗಳನ್ನು ಹೊತ್ತೊಯ್ದಿದ್ದಾರೆ.
ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.













