ಎಸ್ಎಎಫ್ ಘಟಕದ ಅಧಿಕಾರಿ, ಸಿಬ್ಬಂದಿಗೆ ತರಬೇತಿ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇತ್ತೀಚೆಗೆ ಹೊಸದಾಗಿ ಸ್ಥಾಪನೆಯಾಗಿರುವ ಸ್ಪೆಷಲ್ ಆಯಕ್ಷನ್ ಫೋರ್ಸ್ ನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಬುಧವಾರ ತರಬೇತಿ ನೀಡಲಾಯಿತು.







 

ಉತ್ತಮ ಕಾರ್ಯಕ್ಷಮತೆಗಾಗಿ ಕೋಮುಗಲಭೆಯ ಸಂದರ್ಭ ಉದ್ರಿಕ್ತ ಜನ ಸಮೂಹವನ್ನು ಚದುರಿಸುವ ಸಲುವಾಗಿ ಉಪಯೋಗಿಸುವ ಗಲಭೆ ಪ್ರತಿರೋಧ ಗನ್ ಮತ್ತು ಸ್ಟನ್ ಶೆಲ್‌ಗಳ ಉಪಯೋಗದ ಬಗ್ಗೆ ನಡೆಸಲಾದ ಈ ತರಬೇತಿ ಮತ್ತು  ಪ್ರಾತ್ಯಕ್ಷಿಕೆಯಲ್ಲಿ ವಿಶೇಷ ಕಾರ್ಯಪಡೆ ಘಟಕದ ಆಪರೇಷನಲ್ ವಿಂಗ್‌ನ 95 ಮಂದಿ ಅಧಿಕಾರಿ ಮತ್ತು ಸಿಬ್ಬಂಧಿ ಪಾಲ್ಗೊಂಡಿದ್ದರು.






ಗುಪ್ತಚರ ವಿಭಾಗದ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಕುರಿತು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುವ ದ್ವೇಷ ಭಾಷಣ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸುವ ಕುರಿತು ಪರಿಣಾಮಕಾರಿಯಾಗಿ ತರಬೇತಿಯನ್ನು ನೀಡಲಾಗಿದೆ. ಅವರು ಕಾರ್ಯಪ್ರವೃತ್ತಿಗೆ ಸನ್ನದ್ದರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

error: Content is protected !!
Scroll to Top