(ನ್ಯೂಸ್ ಕಡಬ) newskadaba.com ಜೂ. 27. ಮೈಸೂರಿನ ಮಲೆಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳು ವಿಷ ಪ್ರಾಷನದಿಂದಲೇ ಸಾವನ್ನಪ್ಪಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದ್ದಾರೆ.
ಹುಲಿಗಳ ಮರಣೋತ್ತರ ಪರೀಕ್ಷೆಯ ನಂತರ ಮಾತನಾಡಿದ ಅವರು, ತಾಯಿ ಹುಲಿಗೆ 8 ವರ್ಷ ಆಗಿದ್ದರೆ ಮರಿ ಹುಲಿಗಳಿಗೆ 10 ತಿಂಗಳು ಆಗಿತ್ತು. ಹಸುವಿನ ವಿಷದ ಮಾಂಸ ತಿಂದು ಹುಲಿಗಳು ಮೃತಪಟ್ಟಿದೆ.
ಯಾವ ಪ್ರಮಾಣದ ವಿಷ? ಹುಲಿ ಭೇಟೆಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿದೆಯಾ ಅಥವಾ ಮೊದಲೇ ಹಸುವಿಗೆ ವಿಷ ಪ್ರಾಷನ ಮಾಡಲಾಗಿತ್ತಾ ಎಂಬುದು ಲ್ಯಾಬ್ ವರದಿ ಮೂಲಕವಷ್ಟೇ ಗೊತ್ತಾಗಲಿದೆ ಎಂದು ತಿಳಿಸಿದರು.













