ಕ್ಲಬ್ ಗಳಲ್ಲಿ ಹಣ ಪಣಕ್ಕಿಟ್ಟು ಜೂಜಾಟ ನಿಷೇಧ- ಪೊಲೀಸರಿಂದ ಪರಿಶೀಲನೆ

(ನ್ಯೂಸ್ ಕಡಬ) newskadaba.com ಜೂ. 27. ಮಾನ್ಯತೆ ಪಡೆದಿರುವ ಕ್ಲಬ್‌ ಗಳಲ್ಲಿ ಹಣ ಪಣಕ್ಕಿಟ್ಟು ಜೂಜಾಟ ನಡೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸೂಚನೆ ನೀಡಿರುವ ಹಿನ್ನೆಲೆ ಪೊಲೀಸರು ಪುತ್ತೂರಿನ ವಿವಿಧ ಕ್ಲಬ್‌ ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಕ್ಲಬ್‌ಗಳು ಹಲವು ನಿಯಮಗಳನ್ನು ಪಾಲಿಸಿಕೊಂಡು ನಡೆಯುತ್ತಿವೆ. ಅಲ್ಲಿ ಕ್ಯಾರಂ, ಇಸ್ಪೀಟ್ ಆಟಗಳನ್ನು ಆಡಬಹುದು. ಆದರೆ ಯಾವುದೇ ಕಾರಣಕ್ಕೂ ಹಣವನ್ನು ಪಣವಾಗಿಟ್ಟು ಆಡುವಂತಿಲ್ಲ ಎಂಬ ಎಸ್ಪಿಯವರ ಸ್ಪಷ್ಟ ಸೂಚನೆ ಹಿನ್ನಲೆ ಪೊಲೀಸರು ಕ್ಲಬ್‌ ಗಳಿಗೆ ತೆರಳಿ ಸಿ.ಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆಂದು ತಿಳಿದು ಬಂದಿದೆ.

Scroll to Top