(ನ್ಯೂಸ್ ಕಡಬ) newskadaba.com ಜೂ. 27. ಧರ್ಮಸ್ಥಳದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವ್ಯಕ್ತಿಯೊಬ್ಬ ಪೊಲೀಸರ ಮುಂದೆ ಹೇಳಿದ್ದ ವಿಚಾರಗಳ ಕುರಿತು ಇದೀಗ ಬೆಂಗಳೂರಿನ ವಕೀಲರ ತಂಡ ಮಂಗಳೂರು ಎಸ್‌ಪಿ ಕಚೇರಿಗೆ ಆಗಮಿಸಿದೆ.
ದ.ಕ. ಎಸ್ಪಿಯನ್ನು ಭೇಟಿ ಮಾಡಿ ದಾಖಲೆ ನೀಡುವುದಾಗಿ ಇತ್ತೀಚೆಗೆ ವಕೀಲರೊಬ್ಬರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಇದೀಗ ಎಸ್‌ಪಿ ಭೇಟಿಗಾಗಿ ವಕೀಲರ ತಂಡ ಮಂಗಳೂರಿಗೆ ಆಗಮಿಸಿದೆ.













