(ನ್ಯೂಸ್ ಕಡಬ) newskadaba.com ಕಡಬ, ಜೂ. 27. ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಕಂಪನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಟಿವಿಎಸ್ ನಲ್ಲಿ ಹೊಸ ಜುಪಿಟರ್ 125 ಡ್ಯುಯಲ್-ಟೋನ್ ಹಾಗೂ ಬಜೆಟ್ ಸ್ನೇಹಿ ಹೊಸ ಐಕ್ಯೂಬ್-EV ವಾಹನಗಳನ್ನು ಬಿಡುಗಡೆ ಮಾಡಲಾಯಿತು.
ಹಿರಿಯ ವಕೀಲರು ಹಾಗೂ ನೋಟರಿ ಶ್ರೀ ಮನೋಹರ್ ಸಬಳೂರು ಮತ್ತು ಉದ್ಯಮಿ ಹಾಗೂ ಸಾಮಾಜಿಕ ಮುಖಂಡರಾದ ಶ್ರೀ ಶ್ರೀಕೃಷ್ಣ ಎಂ.ಆರ್ ಅವರು ಹೊಸ ವಾಹನಗಳನ್ನು ಅನಾವರಣಗೊಳಿಸಿದರು. ಸಂಸ್ಥೆಯ ಮಾಲಕರಾದ ಶಿವರಾಜ ಅಡಿಗ ಅತಿಥಿಗಳಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರಥಮ ಗ್ರಾಹಕಾರದ ಸಂತೋಷ್, ಇಚಿಲಂಪಾಡಿ ಐ ಕ್ಯೂಬ್ ಹಾಗೂ ಕಿಷನ್ ಕುಮಾರ್ ಬಲ್ಪ ಅವರಿಗೆ ಜುಪಿಟರ್ 125 DT ಕೀ ಹಸ್ತಾಂತರ ನಡೆಯಿತು. ಸಂಸ್ಥೆಯ ಮ್ಯಾನೇಜರ್ ಅನೀಶ್ ಕುಮಾರ್ ಸ್ವಾಗತಿಸಿ, ಸೇಲ್ಸ್ ಮ್ಯಾನೇಜರ್ ಯೋಗೀಶ್ ಕುಮಾರ್ ಧನ್ಯವಾದ ಅರ್ಪಿಸಿದರು.
ಹೊಸ ಅವತಾರದಲ್ಲಿ ಟಿವಿಎಸ್ ಜೂಪಿಟರ್ 125 – TVS JUPITER 125 DT
ಜುಪಿಟರ್ 125 DT SXC ಡ್ಯುಯಲ್- ಟೋನ್ ರೂಪಾಂತರ 96,701 ರೂ. (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ.
ಇದು ಐವರಿ ಬ್ರೌನ್ ಮತ್ತು ಐವರಿ ಗ್ರೇ ಎಂಬ ಎರಡು ಹೊಸ ಡ್ಯುಯಲ್-ಟೋನ್ ಕಲರ್ ಆಪ್ಷನ್ಗಳಲ್ಲಿ ಖರೀದಿಸಲು ಲಭ್ಯವಿದೆ.
ಇದು ಈಗಾಗಲೇ ಮಾರುಕಟ್ಟೆಯಲ್ಲಿರುವ ಮಾದರಿಗಳಿಗಿಂತ ಸ್ವಲ್ಪ ಪ್ರೀಮಿಯಂ ಟಚ್ನೊಂದಿಗೆ ಬರುತ್ತದೆ.
ಹೊಸ ಅಪ್ಡೇಟ್ಸ್ ಜೊತೆಗೆ ಸ್ಮಾರ್ಟ್ ಕನೆಕ್ಟ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಈ ಸ್ಕೂಟರ್‌ನ ಎಂಜಿನ್‌ಗೆ ಸಂಬಂಧಿಸಿದಂತೆ, 124.8cc ಸಾಮರ್ಥ್ಯದ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಲ್ಲಿ ಚಲಿಸುತ್ತದೆ. ಇದು 8.7 bhp ಪವರ್ ಮತ್ತು 11.1 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಂಧನ ದಕ್ಷತೆಗಾಗಿ ETFi ತಂತ್ರಜ್ಞಾನದೊಂದಿಗೆ ಪರಿಷ್ಕರಿಸಲಾದ ಇಂಜಿನ್ 10% ಹೆಚ್ಚಿನ ಮೈಲೇಜ್ ನೀಡುತ್ತದೆ.
ಸ್ಮಾರ್ಟ್ ಕನೆಕ್ಟಿವಿಟಿ ಸಿಸ್ಟಮ್ ಸ್ಕೂಟರ್ ನ ಡಿಸ್ಪ್ಲೇಯಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಮತ್ತು SMS ಅಲರ್ಟ್ಗಳನ್ನು ಹೊಂದಿದೆ. ಅಲ್ಲದೇ ನಿಮ್ಮ ಫೋನ್ ಅನ್ನು ನೋಡದೆಯೇ ನೀವು ಮಾಹಿತಿ ಪಡೆಯಬಹುದು. ಇದು ಸ್ಕೂಟರ್ ಎಲ್ಲಿದೆ ಎಂದು ತಿಳಿಯಲು ವಾಯ್ಸ್ ಆರ್ಡರ್ ಮತ್ತು ಟ್ರ್ಯಾಕಿಂಗ್ ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಟಿವಿಎಸ್ ಐಕ್ಯೂಬ್: ಎಲೆಕ್ಟ್ರಿಕ್ ಸ್ಕೂಟರ್‌ಗಳ ಶ್ರೇಣಿ
ಟಿವಿಎಸ್ iQube ಬಜೆಟ್ ಸ್ನೇಹಿ ಆಯ್ಕೆಗಳಿಂದ ಹಿಡಿದು ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಮಾದರಿಗಳು ಲಭ್ಯವಿದ್ದು ಗುರುವಾರದಂದು ಅಡಿಗ ಮೋಟಾರ್ಸ್, ಕಡಬದಲ್ಲಿ ಅಧಿಕೃತವಾಗಿ ಮಾರಾಟ ಹಾಗೂ ಸರ್ವಿಸ್ ವಿಭಾಗ ಅನಾವರಣ ಗೊಂಡಿದೆ.
ಟಿವಿಎಸ್ ಐಕ್ಯೂಬ್ EV ಶ್ರೇಣಿಯಲ್ಲಿ ಮುಖ್ಯವಾಗಿ –
TVS iQube (2.2kWh): ವೇಗದ ಚಾರ್ಜಿಂಗ್ (2 ಗಂಟೆ) ಹೊಂದಿರುವ ಆರಂಭಿಕ ಹಂತದ ಮಾದರಿಯಾಗಿದ್ದು, ರೂ 1.09 ಲಕ್ಷ ದಿಂದ ಪ್ರಾರಂಭವಾಗುತ್ತದೆ.
TVS iQube S (3.4kWh): 100 ಕಿಮೀ ವ್ಯಾಪ್ತಿ, 78 ಕಿಮೀ/ಗಂಟೆ ಗರಿಷ್ಠ ವೇಗ, 4-ವೇ ಜಾಯ್‌ಸ್ಟಿಕ್ ಹೊಂದಿದೆ.
TVS iQube ST (5.1kWh): ಒಂದೇ ಚಾರ್ಜ್ ನಲ್ಲಿ 150 ಕಿ.ಮೀ. ವರೆಗೆ ಚಲಿಸುವ ಪ್ರಮಾಣೀಕೃತ ಅಪ್ ಗ್ರೇಡ್ ರೇಂಜ್. 82 ಕಿಮೀ/ಗಂಟೆ ಗರಿಷ್ಠ ವೇಗ ಹೊಂದಿದ್ದು ಹಾಗೂ 7″ ಟಚ್ ಸ್ಕ್ರೀನ್ ಹೊಂದಿದೆ.
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 24% ಮಾರುಕಟ್ಟೆ ಪಾಲು ಹೊಂದಿರುವ ಟಿವಿಎಸ್ ಐಕ್ಯೂಬ್ ಗಮನಾರ್ಹ ಮಾರಾಟದ ಬೆಳವಣಿಗೆಯನ್ನು ಕಂಡಿದ್ದು, 600,000 ಯೂನಿಟ್‌ಗಳಿಗೂ ಹೆಚ್ಚು ಮಾರಾಟವಾಗಿದೆ. ಎಕ್ಸ್-ಶೋರೂಂ ಬೆಲೆ ರೂ. 1.09 ಲಕ್ಷ ದಿಂದ ಆರಂಭಗೊಂಡು ರೂ. 1.59 ಲಕ್ಷ ತನಕ ಇದೆ.
*ಸರ್ವಿಸ್ ಮತ್ತು ಪಾರ್ಟ್ಸ್ :*
ಇದೀಗ ಟಿವಿಎಸ್ ಎಲೆಕ್ಟ್ರಿಕ್ ವಾಹನಗಳ ಎಲ್ಲಾ ತರದ ಅಧಿಕೃತ ಸರ್ವಿಸ್ ಮತ್ತು ಪಾರ್ಟ್ಸ್ ಗಳು ಅಡಿಗ ಮೋಟಾರ್ಸ್‌ನಲ್ಲಿ ಲಭ್ಯವಿದ್ದು ಇದಕ್ಕಾಗಿ ಕಂಪನಿ ಟ್ರೈನಿಂಗ್ ಪಡೆದ ನುರಿತ ತಂತ್ರಜ್ಞರ ಪ್ರತ್ಯೇಕ ತಂಡ ಲಭ್ಯವಿರುತ್ತದೆ. ಅಪಾಯಿಂಟ್ಮೆಂಟ್ ಮುಖಾಂತರ ಸಂಸ್ಥೆಗೆ ಭೇಟಿ ನೀಡಿ ಸುಗಮವಾದ ಸರ್ವಿಸ್ ಅನುಭವವನ್ನು ಖಚಿತಪಡಿಸಿಕೊಳ್ಳಬಹುದು.
ಅತೀ ಕಡಿಮೆ ಡೌನ್ ಪೇಮೆಂಟ್ ನಲ್ಲಿ ಬುಕ್ಕಿಂಗ್ಸ್ ತೆರೆದಿದ್ದು, ಕ್ರೆಡಿಟ್ ಕಾರ್ಡ್ ಕ್ಯಾಶ್ ಬ್ಯಾಕ್ ಹಾಗೂ ಟೆಸ್ಟ್ ರೈಡ್ ಗೆ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ಅಡಿಗ ಮೋಟಾರ್ಸ್, ಕಡಬ ಶೋ ರೂಮ್ ಗೆ ಭೇಟಿ ನೀಡಬಹುದು ಅಥವಾ 7618766636 ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.









