ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು



(ನ್ಯೂಸ್ ಕಡಬ) newsmadaba.com ನವದೆಹಲಿ ಜೂ. 27. ಭಾರತದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳಿದ್ದ ನಾಸಾದ ಸ್ಪೇಸ್‌ ಎಕ್ಸ್‌ ನ ಫಾಲ್ಕನ್‌ ನೌಕೆಯು ಗುರುವಾರದಂದು ಸಂಜೆ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿರುವುದಾಗಿ ನಾಸಾ ವರದಿ ಮಾಡಿದೆ.





ಬುಧವಾರದಂದು ಮಧ್ಯಾಹ್ನ ಭಾರತೀಯ ಕಾಲಮಾನ 12.01 ಗಂಟೆಗೆ ನೌಕೆಯು ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್‌ ಸೆಂಟರ್‌ ನಿಂದ ಆಕಾಶಕ್ಕೆ ಚಿಮ್ಮತ್ತು. 10 ನಿಮಿಷಗಳ ಬಳಿಕ ನೌಕೆಯು ಭೂಮಿಯನ್ನು ಸುತ್ತಲಾರಂಭಿಸಿದ್ದು, ಸುಮಾರು 28 ಗಂಟೆಗಳ ಕಾಲ ಪ್ರಯಾಣ ಮಾಡಿದ ಬಳಿಕ ಗುರುವಾರದಂದು ಸಂಜೆ 4.01 ರ ಸುಮಾರಿಗೆ ಉತ್ತರ ಅಟ್ಲಾಂಟಿಕ್ ಸಾಗರದ ಬಾಹ್ಯಾಕಾಶ ನಿಲ್ದಾಣ ತಲುಪಿದೆ ಎಂದು ನಾಸಾ ತಿಳಿಸಿದೆ.






 

ಜೀವಶಾಸ್ತ್ರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿ ಮಹತ್ತರ ಅಧ್ಯಯನ ಕೈಗೊಳ್ಳಲು ಈ ಯೋಜನೆ ರೂಪಿಸಲಾಗಿದ್ದು, ಗುರುತ್ವಾಕರ್ಷಣೆ ಇಲ್ಲದ ಪ್ರದೇಶದಲ್ಲಿ ಸ್ನಾಯು ಹೇಗೆ ವರ್ತಿಸುತ್ತದೆ, ಗಿಡ ಹೇಗೆ ಬೆಳೆಯುತ್ತದೆ ಎಂಬುದನ್ನೆಲ್ಲಾ ಅಧ್ಯಯನ ಮಾಡಲಾಗುತ್ತದೆ. ಈ ಯೋಜನೆ ಸಫ‌ಲವಾದರೆ ಮತ್ತಷ್ಟು ಖಾಸಗಿ ಕಂಪೆನಿಗಳು ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆಗಳು ಹೆಚ್ಚಾಗಲಿವೆ.

error: Content is protected !!
Scroll to Top