(ನ್ಯೂಸ್ ಕಡಬ) newskadaba.com ಜೂ. 26. ಶ್ರೀವನದುರ್ಗ ದೇವಸ್ಥಾನ ದೇಂತಡ್ಕದಲ್ಲಿ ಮುಂದಿನ ತಿಂಗಳು ನಡೆಯುವ ವರಮಹಾಲಕ್ಷ್ಮಿ ಪೂಜೆಯ ಪೂರ್ವಭಾವಿ ಸಭೆಯು ಕ್ಷೇತ್ರದಲ್ಲಿ ನಡೆಯಿತು.
ದೇವಸ್ಥಾನದ ಟ್ರಸ್ಟ್ ಹಿರಿಯರಾದ ಶಂಕರ್ ಭಟ್ ಅಧ್ಯಕ್ಷತೆ ಮತ್ತು ನಿಕಟಪೂರ್ವ ಅಧ್ಯಕ್ಷರಾದ ಕೆ.ಚಂದ್ರಾವತಿ ಇವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಮುಂದಿನ ಅಧ್ಯಕ್ಷರಾಗಿ ಶ್ರೀಮತಿ ಭವಾನಿ ಗುಡ್ಡ ಕೋಡಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶ್ರೀಲತಾ ಕೆರೆಕೋಡಿ ಮತ್ತು ಶ್ರೀಮತಿ ಮಮತ ಆನಡ್ಕ ಮತ್ತು 25 ಸದಸ್ಯರ ಒಳಗೊಂಡ ಸಮಿತಿಯನ್ನು ರಚಿಸಲಾಯಿತು.









