(ನ್ಯೂಸ್ ಕಡಬ) newskadaba.com ಕಡಬ, ಜೂ. 25. ಎಸ್.ವೈ.ಎಸ್ ಕಡಬ ಝೋನ್ ವತಿಯಿಂದ ‘Z TEAM TALK LEADERS MEET’ ಕಾರ್ಯಕ್ರಮವು ನಿಂತಿಕಲ್ಲು ಮದರಸ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ಝೋನ್ ಸಮಿತಿ ಅಧ್ಯಕ್ಷರಾದ ಕೆ.ಎಚ್ ಹಂಝ ಕಳಾರ ವಹಿಸಿದ್ದರು. ಬಹು| ಯುಸುಫ್ ಸಖಾಫಿ ದುವಾ ನೆರವೇರಿಸಿದರು. ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬರಾದ ಜಾಫರ್ ಸಅದಿ ಪಳ್ಳತ್ತೂರು ಕಾರ್ಯಕ್ರಮ ಉದ್ಘಾಟಿಸಿದರು. ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೋಂಟುಗೋಳಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಸುನ್ನೀ ಯುವಜನ ಸಂಘ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಶ್ರಫ್ ಸಖಾಫಿ ಮಾಡಾವು ದಿಕ್ಸೂಚಿ ಭಾಷಣ ಮಾಡಿದರು, ಎಸ್ ವೈ ಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಬಹು| ಶಾಫಿ ಸಖಾಫಿ ಕೊಕ್ಕಡ ಮತ್ತು ಕಡಬ ಝೋನ್ ಉಸ್ತುವಾರಿ ಖಾಸಿಂ ಉಸ್ತಾದ್ ಮಾಚಾರ್, ಎಸ್.ವೈ.ಎಸ್ ಜಿಲ್ಲಾ ಸಮಿತಿ ಸದಸ್ಯರಾದ ಜಮಾಲುದ್ದೀನ್ ಲತೀಫಿ ಮದ್ದಡ್ಕ ಶುಭ ಹಾರೈಸಿದರು. ಎಸ್.ವೈ.ಎಸ್ ಕಡಬ ಝೋನ್ ಕೋಶಾಧಿಕಾರಿ ಝಿಯಾರ್ ಕೋಡಿಂಬಾಳ, ನಿಂತಿಕಲ್ಲು ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು. ಎಸ್.ವೈ.ಎಸ್ ಕಡಬ ಝೋನ್ ದಅ್’ವಾ ಉಪಾಧ್ಯಕ್ಷರಾದ ಉಸ್ಮಾನ್ ಜೌಹರಿ ನೆಲ್ಯಾಡಿ ಸ್ವಾಗತಿಸಿ, ದಅ್’ವಾ ಕಾರ್ಯದರ್ಶಿ ಅಝೀಝ್ ಸಅದಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಫಾರೂಕ್ ಎನ್.ಕೆ ಕಾರ್ಯಕ್ರಮ ನಿರ್ವಹಿಸಿದರು. ಕಡಬ, ಸವಣೂರು, ನಿಂತಿಕಲ್ಲು, ನೆಲ್ಯಾಡಿ ಸರ್ಕಲ್ ವ್ಯಾಪ್ತಿಯ ಹಲವು ನಾಯಕರು ಭಾಗವಹಿಸಿದ್ದರು.









