ಕಾಡು ಮನುಷ್ಯರ ವೇಷ ಧರಿಸುವವರಿಗೆ ದಿನಕ್ಕೆ 6000 ರೂ. ವೇತನ ಘೋಷಿಸಿದ ಚೀನಾ



(ನ್ಯೂಸ್ ಕಡಬ) newskadaba.com ಜೂ. 18. ಪ್ರವಾಸಿಗರನ್ನು ಸೆಳೆಯಲು ಕಾಡು ಮನುಷ್ಯರ ವೇಷಭೂಷಣ ಧರಿಸಿ ನಟಿಸುವವರಿಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಶೆನ್ನೊಂಶ್ಚಿಯಾ ಮೀಸಲು ಪೃಕೃತಿ ಪ್ರದೇಶದಲ್ಲಿ ಉದ್ಯೋಗಾವಕಾಶ ನೀಡಲಾಗಿದ್ದು, ಜುಲೈನಿಂದ ಆಗಸ್ಟ್‌ ವರೆಗೆ ಮಾತ್ರ ಈ ಕೆಲಸ ಇರಲಿದೆ. ಈ ಉದ್ಯೋಗಕ್ಕೆ ದಿನಕ್ಕೆ 500 ಯುವಾನ್ (ಅಂದಾಜು ₹6,000) ವೇತನ ನೀಡಲಾಗುತ್ತದೆ ಎಂದು ಸೌತ್‌ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಕೆಲಸಕ್ಕೆ ನೇಮಕಾತಿ ಪ್ರಾರಂಭವಾದ ಎರಡೇ ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದಾಗಿ ವರದಿಯಾಗಿದೆ.







ವರದಿಯ ಪ್ರಕಾರ, ಈ ಪಾತ್ರಕ್ಕಾಗಿ ನೇಮಕಗೊಳ್ಳುವ ಯಾವುದೇ ವ್ಯಕ್ತಿಯು ಕಾಡು ಮನುಷ್ಯರ ಉಡುಪುಗಳನ್ನು ಧರಿಸಿ, ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗಬೇಕು. ನೃತ್ಯ ಮಾಡಬೇಕು ಮತ್ತು ಪ್ರವಾಸಿಗರೊಂದಿಗೆ ಇತರ ಸಂವಹನಗಳಲ್ಲಿ ತೊಡಗಿಸಿಕೊಳ್ಳಬೇಕು.






 

ಜಾಹೀರಾತಿನ ಪ್ರಕಾರ “ಅನಾಗರಿಕರು” ಪ್ರವಾಸಿಗರು ನೀಡುವ ಆಹಾರವನ್ನು ಸ್ವೀಕರಿಸಿ ತಿನ್ನಬೇಕು. “ಹಸಿ ಆಹಾರವನ್ನು ತಿನ್ನಲು ಇಷ್ಟಪಡುವವರಿಗೆ ಸಹ ಆದ್ಯತೆ ನೀಡಲಾಗುವುದು” ಎಂದು ಕಂಪನಿಯು ತಿಳಿಸಿದೆ. “ಮುಕ್ತ ವ್ಯಕ್ತಿತ್ವ ಹೊಂದಿರುವವರು, ಸಣ್ಣ ವೀಡಿಯೊಗಳನ್ನು ಚಿತ್ರೀಕರಿಸುವಲ್ಲಿ ಸೃಜನಶೀಲರು ಮತ್ತು ದೀರ್ಘಕಾಲ ಕಾಡಿನಲ್ಲಿ ವಾಸಿಸಲು ಒಗ್ಗಿಕೊಂಡಿರುವವರಿಗೆ ಆದ್ಯತೆ ನೀಡಲಾಗುವುದು” ಎಂದು ಅದು ಹೇಳಿದೆ.

error: Content is protected !!
Scroll to Top