ಮನೆ 3ನೇ ಮಹಡಿಯಲ್ಲಿ ಕಾರಿನಂತೆ ಕಾಣುವ ನೀರಿನ ಟ್ಯಾಂಕ್ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com . 16.  ಇಲ್ಲೊಬ್ಬ ವ್ಯಕ್ತಿ ಮನೆ ಕಟ್ಟುವ ಕನಸಿನ ಜೊತೆಗೆ ವಿಶೇಷವಾಗಿ ಮನೆಯನ್ನು ನಿರ್ಮಿಸಲು ಪ್ರಯತ್ನ ಮಾಡಿದ್ದಾರೆ. ಮನೆಯ ಮಾಲೀಕರೊಬ್ಬರು ಕಾರನ್ನು ತಮ್ಮ ಮೂರನೇ ಮಹಡಿಯಲ್ಲಿ ನಿಲ್ಲಿಸಿದ್ದಾರೆ. ಈ ವಿಡಿಯೋ ವೈರಲ್ ಎಲ್ಲೆಡೆ ವೈರಲ್ ಆಗಿದೆ.

ಈ ವ್ಯಕ್ತಿಯು ತನ್ನ ಮನೆಯ ಮೂರನೇ ಮಹಡಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ನಿಲ್ಲಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಆದರೆ ಇದು ನಿಜವಾದ ಕಾರು ಎಂದುಕೊಂಡರೆ ನಿಮ್ಮ ಊಹೆ ನಿಜಕ್ಕೂ ತಪ್ಪು. ಅಂದರೆ ವಾಸ್ತವದಲ್ಲಿ ಮನೆಯ ಟೆರೇಸ್‌ನಲ್ಲಿ ಸ್ಕಾರ್ಪಿಯೋ ಕಾರಿನಂತೆ ಕಾಣುವ ನೀರಿನ ಟ್ಯಾಂಕ್ ವಿನ್ಯಾಸಗೊಳಿಸಲಾಗಿದೆ. ಮುಂಭಾಗದಲ್ಲಿರುವ ಗ್ರಿಲ್‌, ಕ್ರೋಮ್ ಫಿನಿಶ್ ಹಾಗೂ ಮಹೀಂದ್ರಾ ಲೋಗೋ ನೋಡಿದರೆ ಇದು ನಿಜವಾದ ಕಾರು ಎನ್ನುವಂತಿದೆ. ಹಲವರು , ‘ಈ ಮನೆ ಮಾಲೀಕನ ಐಡಿಯಾವನ್ನು ಮೆಚ್ಚಿ ಕಾಮೆಂಟ್ ಮಳೆ ಸುರಿಸಿದ್ದಾರೆ.

Also Read  ಸಬಳೂರು: ಆಯುಷ್ಮಾನ್‌ ಕಾರ್ಡ್‌ ನೋಂದಾವಣೆ ಶಿಬಿರ

 

error: Content is protected !!
Scroll to Top