ಡ್ರೋನ್ ಗಳಿಗೆ ಪೈಪೋಟಿ ನೀಡಲು ಬರುತ್ತಿದೆ ರೆಡ್’ಮಿ ಫ್ಲೈಯಿಂಗ್ ಕ್ಯಾಮೆರಾ ಫೋನ್..!

(ನ್ಯೂಸ್ ಕಡಬ) newskadaba.com ನ. 07. ಮದುವೆ, ಸಭೆ-ಸಮಾರಂಭ ಮುಂತಾದ ಕಾರ್ಯಕ್ರಮಗಳಲ್ಲಿ ಡ್ರೋನ್ ಕ್ಯಾಮೆರಾಗಳಿಂದ ಫೋಟೋ, ವಿಡಿಯೋ ತೆಗೆಯುವುದನ್ನು ನೋಡಿರುತ್ತೇವೆ. ಈಗ ಡ್ರೋನ್ ಕ್ಯಾಮೆರಾಗಳಿಗೆ ಪೈಪೋಟಿ ಎಂಬಂತೆ ಹಾರುವ ಕ್ಯಾಮೆರಾ ಫೋನ್ ಅನ್ನು ರೆಡ್’ಮಿ ಕಂಪನಿಯು ರೆಡ್’ಮಿ ಫ್ಲೈಯಿಂಗ್ ಕ್ಯಾಮೆರಾ 5G ಫೋನ್ ನ್ನು ಬಿಡುಗಡೆ ಮಾಡಿದೆ.

ಇದರಲ್ಲಿ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ದರ, ಗೊರಿಲ್ಲಾ ಗ್ಲಾಸ್ ರಕ್ಷಣೆ ನೀಡಲಾಗಿದೆ. 300MP ಕ್ಯಾಮೆರಾ ಮತ್ತು 6000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ವಿವಿಧ ಮೆಮೊರಿ ಆಯ್ಕೆಗಳು ಲಭ್ಯವಿದ್ದು, 8 GBವರೆಗೆ ಹೆಚ್ಚುವರಿ ಮೆಮೊರಿಯನ್ನು ಹೊಂದಿದೆ. 6.7 ಇಂಚಿನ AMOLED ಡಿಸ್‌ಪ್ಲೇ ಲಭ್ಯವಾಗಲಿದ್ದು, ಡಿಸ್‌ಪ್ಲೇ ಯು (2400 x 1080 ಪಿಕ್ಸೆಲ್‌ ಗಳ) ರೆಸಲ್ಯೂಶನ್ ನ್ನು ಹೊಂದಿರಲಿದೆ. ಈ ಮೊಬೈಲ್‌ ನ ಒಟ್ಟು ತೂಕ ಸುಮಾರು 180 ಗ್ರಾಂ ಆಗಿರುತ್ತೆ ಎನ್ನಲಾಗಿದೆ. IP68 ರೇಟಿಂಗ್ ಹೊಂದಿದೆ.

Also Read  ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಪ್ 4 ಸಿಎನ್​ಜಿ ಕಾರುಗಳಿವು!


ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಸಾಮರ್ಥ್ಯದೊಂದಿಗೆ ಭಾರತದ ಮಾರುಕಟ್ಟೆಗೆ ಬರಲಿದೆ. 4GB RAM + 64GB ಇಂಟರ್‌ ನಲ್ ಸ್ಟೋರೇಜ್, 6GB RAM, 128GB ಇಂಟರ್‌ನಲ್ ಸ್ಟೋರೇಜ್ ಮತ್ತು 256GB ವರೆಗಿನ ಇಂಟರ್‌ನಲ್ ಸ್ಟೋರೇಜ್ ನ್ನು 8GB RAMನೊಂದಿಗೆ ಒದಗಿಸಲಾಗುತ್ತಿದೆ. ಇದರ ಆರಂಭಿಕ ಬೆಲೆ 15,000 ರೂ. ಆಕರ್ಷಕ ರಿಯಾಯಿತಿಗಳು ಲಭ್ಯ. ರಿಯಾಯಿತಿ ಮತ್ತು ಆಕರ್ಷಕ ಆಫರ್ ಬಳಸಿಕೊಂಡು ಈ ವಿಶೇಷ ಸ್ಮಾರ್ಟ್ ಫೋನ್ ನ್ನು 10 ಸಾವಿರ ರೂಪಾಯಿವರೆಗೂ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.

error: Content is protected !!
Scroll to Top