ಡ್ರೆಸ್ ಕೋಡ್ ಉಲ್ಲಂಘನೆ- ಸ್ಟಾಲಿನ್ ಗೆ ಕೋರ್ಟ್ ನೋಟೀಸ್..!

(ನ್ಯೂಸ್ ಕಡಬ) newskadaba.com ಅ.31. ಡ್ರೆಸ್‌ಕೋಡ್‌ ಉಲ್ಲಂಘಿಸಿದ ಆರೋಪದಡಿ ಮದ್ರಾಸ್‌ ಹೈಕೋರ್ಟ್‌ ರಿಟ್‌ ಅರ್ಜಿ ವಿಚಾರವಾಗಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ಗೆ ನೋಟಿಸ್‌ ಜಾರಿ ಮಾಡಿದೆ.

ಉದಯಿಸುತ್ತಿರುವ ಸೂರ್ಯ – ಇದು ಡಿಎಂಕೆ ಚಿಹ್ನೆಯಾಗಿದ್ದು, ಇದನ್ನು ತಮ್ಮ ಟಿ-ಶರ್ಟ್‌ ಧರಿಸಿ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಹೀಗಾಗಿ ರಾಜ್ಯ ಸರಕಾರಿ ನೌಕರರ ವಸ್ತ್ರ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ವಕೀಲ ಟಿ.ಸತ್ಯಕುಮಾರ್‌ ಎಂಬುವವರು ಪಿಐಎಲ್‌ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ಮಾಡಿದ ಕೋರ್ಟ್‌ ಇದೀಗ ನೋಟಿಸ್‌ ಜಾರಿ ಮಾಡಿದೆ.

error: Content is protected !!
Scroll to Top