ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- ಕನ್ನಡದ ‘ವೆಂಕ್ಯಾ’ ಸಿನಿಮಾ ಆಯ್ಕೆ

(ನ್ಯೂಸ್ ಕಡಬ) newskadaba.com ಅ.26. ನವೆಂಬರ್ 20ರಿಂದ 28ರ ವರೆಗೆ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಗೋವಾದ ಪಣಜಿಯಲ್ಲಿ ನಡೆಯಲಿದ್ದು, ಈ ಚಲನಚಿತ್ರೋತ್ಸವಕ್ಕೆ ಕನ್ನಡದ ‘ವೆಂಕ್ಯಾ’ ಸಿನಿಮಾ ಆಯ್ಕೆಯಾಗಿದೆ. ಇದರಲ್ಲಿ ದೇಶ ವಿದೇಶದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಸಿನಿಮೋತ್ಸವದಲ್ಲಿ ‘ವೆಂಕ್ಯಾ’ ಸಿನಿಮಾ ಪ್ರದರ್ಶನ ಕಾಣಲಿವೆ.

ಪವನ್ ಒಡೆಯರ್ ಹಾಗೂ ಸಾಗರ್ ಪುರಾಣಿಕ್ ಕಾಂಬಿನೇಷನ್‌ನಲ್ಲಿ ‘ವೆಂಕ್ಯಾ’ ಚಿತ್ರ ಮೂಡಿ ಬಂದಿದೆ. ಈ ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸಾಗರ್ ಗೆ ಜೋಡಿಯಾಗಿ ಶಿಮ್ಲಾದ ರೂಪಾಲಿ ಸೂದ್ ತೆರೆ ಹಂಚಿಕೊಂಡಿದ್ದಾರೆ.

error: Content is protected !!