ಕಡಬ ಅಡಿಗ ಮೋಟಾರ್ಸ್‌ನಲ್ಲಿ ಸ್ಮಾರ್ಟ್ ಸ್ಕೂಟರ್ ಟಿವಿಎಸ್ ‘ಎನ್ ಟಾರ್ಕ್ 125’ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಮಾ.19. ಇಲ್ಲಿನ ವೈಭವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಟಿ.ವಿ.ಎಸ್. ಮೋಟಾರ್ಸ್‌ ಕಂಪೆನಿಯ ಅಧಿಕೃತ ಡೀಲರ್ ತಾಲೂಕಿನ ಪ್ರಸಿದ್ದ ಅಡಿಗ ಮೋಟಾರ್ಸ್‌ ಮಾರಾಟ ಮಳಿಗೆಯಲ್ಲಿ ಟಿ.ವಿ.ಎಸ್ ಎನ್ ಟಾರ್ಕ್ 125 ನ್ನು ಬಿಡುಗಡೆಗೊಳಿಸಲಾಯಿತು.

ಗ್ರಾಹಕರಾದ ದೇವಸಗಾಯಂ ಕಡಬ ಹಾಗೂ ಡೀಕಯ್ಯ ಕೈಕಂಬ ಇವರು ಹೊಸ ಮಾದರಿಯ ಎನ್ಟಾರ್ಕ್ 125 ಸ್ಕೂಟರ್ನ್ನು ಅನಾವರಣಗೊಳಿಸಿದರು. ಪ್ರಥಮ ಗ್ರಾಹಕರಾದ ನಿರಂಜನ್ ಕುಮಾರ್ ಎಡಮಂಗಲ ಹಾಗೂ ಅಂದುಕುಂಞ ಕೋಡಿಂಬಾಳ ಇವರಿಗೆ ಪ್ರಮುಖರಾದ ಉದ್ಯಮಿ ಜನಾರ್ದನ ರಾವ್ ಅಡೂರು ಹಾಗೂ ವೈಭವ ಕಾಂಪ್ಲೆಕ್ಸ್‌ ಮಾಲಕ ಅರುಣ್ ಕುಮಾರ್ ಜಡೆಮನೆಯವರು ಕೀಲಿ ಕೈ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಡಬ ಜೀ ಮೊಬೈಲ್‌ ಸಮದ್, ಸ್ಪರ್ಶ ಮೊಬೈಲ್ನ ನಿತ್ಯಾನಂದ, ಗಣೇಶ್ ಕೊಲ್ಡ್‌ಹೌಸ್ನ ನಾರಾಯಣ ಗೌಡ, ದ್ವಿಚಕ್ರ ಗ್ಯಾರೆಜ್ ಮಾಲಕ ದೇವಣ್ಣ, ರಬ್ಬರ್ ವ್ಯಾಪಾರಸ್ಥ ಅನಿಶ್ ಆರಿಗ, ಮಹಾಗಣಪತಿ ಡ್ರೈವಿಂಗ್ ಸ್ಕೂಲ್ನ ನಿತಿನ್, ಲಕ್ಷ್ಮೀ ಜ್ಯುವೆಲ್ಲರಿಯ ವಿನಯ ಆಚಾರ್ಯ, ಹಾಗೂ ತ್ಯಾಗರಾಜ, ಸುನಿಲ್ ಮೊದಲಾದವರು ಉಪಸ್ಥಿತರಿದ್ದರು. ಅಡಿಗ ಮೋಟಾರ್ಸ್‌ ಮಾಲಕರಾದ ರಾಧಾಕೃಷ್ಣ ಅಡಿಗ, ಆಡಳಿತ ವ್ಯವಸ್ಥಾಪಕ ಶಿವರಾಜ್ ಕೆ.ಆರ್ರವರು ಎಲ್ಲರನ್ನೂ ಸ್ವಾಗತಿಸಿ ಬರಮಾಡಿಕೊಂಡಿಕೊಂಡರು, ಸಂಸ್ಥೆಯ ಸಿಬಂದಿಗಳು ಸಹಕರಿಸಿದರು.

ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ ತಂತ್ರಜ್ಲಾನ ಪವರ್ ಪುಲ್ 125 ಸಿಸಿ ಎಂಜಿನ್ ಹೊಂದಿರುವ ಸ್ಪೂರ್ಟಿಲುಕ್ನಲ್ಲಿರುವ ಹೊಸ ಸ್ಕೂಟರೊಂದನ್ನು ಟಿ.ವಿ.ಎಸ್ ಕಂಪೆನಿಯು ಬಿಡುಗಡೆಗೊಳಿಸಿದೆ. ಪರಿಣಾಮಕಾರಿ ಕ್ರೀಡಾ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿರುವ ಹೊಸ ಟಿವಿಎಸ್ ಎನ್ಟಾರ್ಕ್ 125 ಸ್ಕೂಟರ್ ಅಭಿವೃದ್ದಿಯಲ್ಲಿ ರೇಸ್ ಟ್ರ್ಯಾಕ್ ಕೌಶಲ್ಯವನ್ನು ಬಳಕೆ ಮಾಡಿರುವುದರಿಂದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಮತ್ತಷ್ಟು ಪೈಪೋಟಿಗೆ ವೇದಿಕೆ ಸೃಷ್ಟಿಸಿದೆ. ಅಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್‌ (ಕ್ಲಚ್ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಪೆಡಲ್ ಶಿಷ್ಪರ್ನಿಂದ ಕಾರ್ಯ ನಿರ್ವಹಿಸಲಿರುವ ಎನ್ಟಾರ್ಕ್ 125, ಏರ್ ಕೂಲ್ಡ್‌, ಸಿಂಗಲ್ ಸಿಲಿಂಡರ್ 124.79 ಸಿವಿಐಟಿ ರೆವ್ ಎಂಜಿನ್ ಹೊಂದಿದ್ದು, 9.27 ಬಿ.ಎಚ್.ಪಿ ಮತ್ತು 140.4 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮಥರ್ಯ್‌ದೊಂದಿಗೆ ಪ್ರತಿ ಗಂಟೆಗೆ 95 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಎನ್ಟಾರ್ಕ್ 125 ಸ್ಕೂಟರ್ನ ಪ್ರಮುಖ ಆಕರ್ಷಣೆಯೆಂದರೆ ಸ್ಮಾರ್ಟ್ ಕನೆಕ್ಟ್‌ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಬ್ಲೂಟೂತ್ ಸಂಪರ್ಕ ಹೊಂದಿರುವ ಭಾರತದ ಮೊದಲ ಸ್ಮಾರ್ಟ್ ಸ್ಕೂಟರ್ ಇದಾಗಿದೆ.

Also Read  ಆಗಸ್ಟ್ 1 ರಿಂದ ಈ ‘ಸ್ಮಾರ್ಟ್ ಪೋನ್' ಗಳು ಕಾರ್ಯನಿರ್ವಹಿಸಲ್ಲ- ಗೂಗಲ್ ವರದಿ

ಸುಮಾರು ಐದು ವರ್ಷಗಳಷ್ಟು ಮುನ್ನೋಟದ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಿರುವ ಸ್ಕೂಟರ್ನಲ್ಲಿ ಎಲ್ಇಡಿ ಸ್ಕ್ರೀನ್ನಲ್ಲಿ ಎಂಜಿನ್ ಹಾಗೂ ಚಾಲನೆ ಬಗ್ಗೆ ಸಂಪುರ್ಣ ಮಾಹಿತಿ ನೀಡಲಿದೆ. ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್‌ ಕಾಲರ್ ಐಡಿ, ಪಾರ್ಕಿಂಗ್ ಲೊಕೇಷನ್ ಸೇವೆಗಳೊಂದಿಗೆ ಲ್ಯಾಪ್ ಟೈಮರ್, ಟಾಪ್ ಹಾಗೂ ಸರಾಸರಿ ವೇಗದ ಮಾಹಿತಿಯನ್ನು ಕೂಡ ನೀಡಲಿದೆ. ಮುಂಬಾಗದಲ್ಲಿ 30 ಎಂಎಂ ಟೆಲಿಸ್ಕಪಿಕ್ ಸಸ್ಷಷನ್ ಹಾಗೂ ಹಿಂಬಾಗದಲ್ಲಿ ಗ್ಯಾಸ್ ಚಾಜರ್ಡ್‌ ಡ್ಯಾಂಪರ್ ಜತೆಗೆ, 22 ಲೀಟರ್ ಸಾಮಾಥರ್ಯ್‌ದ ಅಂಡರ್ ಸೀಟ್ ಸ್ಟೋರೆಜ್ ನೀಡಲಾಗಿದ್ದು ಮೊಬೈಲ್ ಚಾರ್ಜಿಂಗ್ ಸ್ಲಾಟ್ ಕೂಡ ಇರಲಿದೆ. ಮುಂದುಗಡೆ ಆಕರ್ಷಕ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್‌ ಜತೆಗೆ ಹ್ಯಾಂಡಲ್ ಬಾರ್ನಲ್ಲೆ ಇಂಡಿಕೇಟರ್ ಕೊಡಲಾಗಿದ್ದು ಹಿಂದುಗಡೆ ಎಲ್ಇಡಿ ಟೈಲ್ ಲ್ಯಾಂಪ್ ಹಾಗೂ 12 ಇಂಚುಗಳ ಡೈಮಂಡ್ ಕಟ್ ಅಲಾಯ್ ವ್ಹಿಲ್ಗಳನ್ನು ಜೋಡಿಸಲಾಗಿದೆ. ಮ್ಯಾಟ್ ಪಿನಿಶಿಂಗ್ ಮೋಡ್ನಲ್ಲಿ ಯೆಲೋ, ಗ್ರೀನ್, ರೆಡ್ ಹಾಗೂ ವೈಟ್ ಬಣ್ಣಗಳ ಆಯ್ಕೆಯಲ್ಲಿ ಅತಿ ಕಡಿಮೆ ರೂ.58750 (ಎಕ್ಸ್‌ಶೋರೂಂ) ಬೆಲೆಯಲ್ಲಿ ಲಭ್ಯವಾಗಲಿದ್ದು ಉಚಿತ ಟೆಸ್ಟ್‌ ರೈಡ್ ಕೂಡ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಬುಕ್ಕಿಂಗ್ ಗಾಗಿ 7618766636 ಸಂಖ್ಯೆಯನ್ನು ಸಂಪರ್ಕಿಸಬಹುದು.

Also Read  ಕಂಪ್ಯೂಟರ್, ಸಿಸಿ ಕ್ಯಾಮೆರಾ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದ ಕಡಬದ 'ಯುನಿಕ್ ಕಂಪ್ಯೂಟರ್' ➤ ರೇಶನ್ ಕಾರ್ಡ್, ಆಧಾರ್ ಕಾರ್ಡ್, ಆನ್‌ಲೈನ್ ಅಪ್ಲಿಕೇಶನ್ ಸೇವೆ ಆರಂಭ

error: Content is protected !!
Scroll to Top