ಬರೀ 94 ಸಾವಿರಕ್ಕೆ ಖರೀದಿಸಿ ರಾಯಲ್ ಎನ್‌ಫೀಲ್ಡ್..!

(ನ್ಯೂಸ್ ಕಡಬ) newskadaba.com ಅ. 22. ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ರೋಯಲ್ ಎನ್‌ಫೀಲ್ಡ್ ಕಂಪನಿಯು ಅತ್ಯಂತ ಆಕರ್ಷಕ ವಿನ್ಯಾಸಗಳೊಂದಿಗೆ ಮೋಟಾರ್‌ ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆ ತಂದಿರುವ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಬೈಕ್ ಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಇಂತಹ ಸುಂದರ ಬೈಕ್ ನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎನ್ನುವವರಿಗಾಗಿ ರಾಯಲ್ ಎನ್ ಫೀಲ್ಡ್ ಮಿನಿಯೇಚರ್ ಆವೃತ್ತಿಯನ್ನು ಹೊರತರಲಿದೆ. ನವೆಂಬರ್ 2022 ರಲ್ಲಿ, ಕ್ಲಾಸಿಕ್ ಬೈಕ್‌ಗಳನ್ನು ಮೊದಲ ಬಾರಿಗೆ ಸಣ್ಣ ಮಾದರಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಕ್ಲಾಸಿಕ್ 500 ಬೈಕ್ ಆಧರಿಸಿ ಹೊಸ 1:3 ಪ್ರಮಾಣದ ಮಾದರಿಗಳನ್ನು ಕಂಪನಿಯು ತಯಾರಿಸುತ್ತಿದೆ. ಇವುಗಳಿಗೆ ಬುಕ್ಕಿಂಗ್‌ಗಳು ಈಗಾಗಲೇ ತೆರೆಯಲಾಗಿದ್ದು, ಬೈಕ್​ನ ದರ ಹಾಗೂ ಇನ್ನಿತರ ಮಾಹಿತಿಗಳು ಇಲ್ಲಿವೆ.

94,990 ರೂಪಾಯಿಗೆ ಎನ್‌ಫೀಲ್ಡ್ ಕ್ಲಾಸಿಕ್

ಈ 1:3 ಸ್ಕೇಲ್ ಮಾದರಿಗಳು ಮೂಲ ಬೈಕುಗಳಂತೆಯೆ ಇರಲಿದ್ದು, ಆದರೆ ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುತ್ತವೆ. ಇವು ಮಿನಿ ಮಾದರಿಗಳಾದರೂ ತುಂಬಾ ದುಬಾರಿಯಾಗಿರಲಿವೆ. 2022 ರಲ್ಲಿ ಬಿಡುಗಡೆಯಾದಾಗ ಪ್ರತಿಯೊಂದು ಬೈಕ್ ಗಳ ಬೆಲೆ 67,990 ತ್ತು. ಈಗ ಪ್ರತಿಯೊಂದರ ಬೆಲೆ ರೂಪಾಯಿ 94,990 ಗೆ ನಿಗದಿಯಾಗಿದೆ. ಇವುಗಳನ್ನು ಐಕಾನಿಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500ರ ಮಿನಿ ಆವೃತ್ತಿಯಾಗಿ ನೋಡಲಾಗುತ್ತದೆ. ಆದರೆ ಇದರಲ್ಲಿ ಎಲ್ಲಾ ವಿವರಗಳು ಪರಿಪೂರ್ಣವಾಗಿದ್ದು, ಬಹುತೇಕವಾಗಿ ರಾಯಲ್ ಎನ್‌ ಫೀಲ್ಡ್ ಕ್ಲಾಸಿಕ್ 500 ನ ನಿಖರವಾದ ಪ್ರತಿಕೃತಿಯನ್ನೆ ಹೋಲುತ್ತವೆ.

Also Read  ಕಡಬದಲ್ಲಿ ಶ್ರೀ ಲಕ್ಷ್ಮೀ ಮೊಬೈಲ್ ಮಾರಾಟ ಮತ್ತು ಸೇವಾ ಸಂಸ್ಥೆ ಶುಭಾರಂಭ

ಏಳು ಬಣ್ಣಗಳಲ್ಲಿ ಮಾರುಕಟ್ಟೆಗೆ ಆಗಮನ

ಈ ಮಿನಿ ಮಾದರಿಗಳು ಕ್ರೋಮ್ ಬ್ಲಾಕ್, ಮರೂನ್ ಕ್ರೋಮ್, ಫಾರೆಸ್ಟ್ ಗ್ರೀನ್ ಕ್ರೋಮ್, ಟೀಲ್ ಗ್ರೀನ್, ಬ್ಯಾಟಲ್ ಗ್ರೀನ್, ಗನ್ ಗ್ರೇ ಜೆಟ್ ಬ್ಲ್ಯಾಕ್ ಎಂಬ ಏಳು ಬಣ್ಣಗಳಲ್ಲಿ ಮಾರುಕಟ್ಟೆಗೆ ಆಗಮಿಸಲಿದ್ದು, ಈ ಮಾದರಿಗಳ ತೂಕವು 8.5 ಕೆಜಿ. ಇದು 780 mm ಉದ್ದ, 380 mm ಅಗಲ ಮತ್ತು 261 mm ಎತ್ತರವನ್ನು ಅಳೆಯುತ್ತದೆ. ಇವುಗಳಲ್ಲಿ ವೈರ್ ಸ್ಪೋಕ್ ವೀಲ್‌ಗಳು, ಪೀಶೂಟರ್ ಎಕ್ಸಾಸ್ಟ್ ಮತ್ತು ಸ್ಪ್ರಂಗ್ ಸೀಟ್ ಕೂಡ ಸೇರಿವೆ. ಈ ಮಾದರಿಗಳನ್ನು ತಯಾರಿಸಲು ಮೂಲ ಬೈಕಿನ ಉಪಯೋಗಿಸಿದ ಭಾಗಗಳನ್ನೇ ಬಳಸಲಾಗಿದೆ.

Also Read  ಕರ್ನಾಟಕದಲ್ಲಿ ಸೆಕೆಂಡ್ ಸಂಡೇ ಲಾಕ್‍ಡೌನ್ ಇಂದು ರಾತ್ರಿಯಿಂದಲೇ ಜಾರಿ..!!

ನೀವು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್‌ಗಳ ಮಿನಿ ಮಾಡೆಲ್‌ಗಳನ್ನು ಖರೀದಿಸಲು ಬಯಸಿದರೆ, ಇದೀಗ ರಾಯಲ್ ಎನ್‌ಫೀಲ್ಡ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ನಿಮ್ಮ ಆಯ್ಕೆಯ ಬಣ್ಣವನ್ನು ಆಯ್ಕೆಮಾಡಿ ಮತ್ತು ಬುಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಬುಕಿಂಗ್ ಪ್ರಕ್ರಿಯೆಯು ಅಕ್ಟೋಬರ್ 15ರ ಮಧ್ಯಾಹ್ನ 12:15 ಕ್ಕೆ ಪ್ರಾರಂಭವಾಗಿದ್ದು, ಕಂಪನಿಯು ಈ ಬುಕಿಂಗ್ ಅನ್ನು ಫ್ಲ್ಯಾಶ್ ಸೇಲ್ ಎಂದು ಕರೆಯುತ್ತಿದೆ.

error: Content is protected !!
Scroll to Top