ಇನ್ಮುಂದೆ ಸಿಮ್ ಕಾರ್ಡ್, ನೆಟ್ ವರ್ಕ್ ಇಲ್ಲದೇ ಕಾಲ್ – ಹೊಸ ಹೆಜ್ಜೆ ಇಟ್ಟ ಬಿಎಸ್ಎನ್ಎಲ್

(ನ್ಯೂಸ್ ಕಡಬ) newskadaba.com ಅ.22. ಇಂದಿನ ಮುಂದುವರಿಯುತ್ತಿರುವ ಯುಗದಲ್ಲಿ ತಂತ್ರಜ್ಞಾನವು ಅತೀ ವೇಗವಾಗಿ ತನ್ನ ಮುಂದುವರಿಯುತ್ತಿದೆ. ಇದೀಗ ಬಿಎಸ್‌ಎನ್‌ಎಲ್ ಡೈರೆಕ್ಟ್ 2 ಡಿವೈಸ್(D2D) ತಂತ್ರಜ್ಞಾನದ ಮೂಲಕ ಯಾವುದೇ ನೆಟ್‌ ವರ್ಕ್, ಸಿಮ್ ಇಲ್ಲದೇ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿಯನ್ನು ಸೃಷ್ಟಿಸುತ್ತಿದೆ.

ಸದ್ಯ ಇದರ ಪ್ರಯೋಗ ಯಶಸ್ವಿಯಾಗಿದ್ದು, ಇದು ಎಲ್ಲಾ ಸ್ಥಳದಲ್ಲೂ ಅತ್ಯುತ್ತಮ ಸಂಪರ್ಕವನ್ನು ಒದಗಿಸಬಲ್ಲದು. ಶೀಘ್ರದಲ್ಲೇ ಈ ಸೇವೆ ಭಾರತೀಯರಿಗೆ ಲಭ್ಯವಾಗಲಿದೆ.  ವಯಾಸ್ಯಾಟ್ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಈಗಾಗಲೇ ಡಿ2ಡಿ ಪ್ರಯೋಗ ಯಶಸ್ವಿಯಾಗಿ ಮಾಡಿದೆ. ಇದೀಗ ಹಂತ ಹಂತವಾಗಿ ಡಿ2ಡಿ ಸ್ಯಾಟಲೈಟ್ ಕಮ್ಯೂನಿಕೇಶನ್ ಜಾರಿಯಾಗಲಿದೆ. ಈ ಮೂಲಕ ಭಾರತದಲ್ಲಿ ರಿಮೋಟ್ ಏರಿಯಾದಲ್ಲೂ ಕರೆ, ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ. ಟು ವೇ ಮೇಸೇಜಿಂಗ್, ಎಸ್ಒಎಸ್ ಮೆಸೇಜಿಂಗ್ ಸೇರಿದಂತೆ ಎರಡು ಮಾದರಿಯಲ್ಲಿ ಪ್ರಯೋಗ ನಡೆಸಲಾಗಿದೆ. ಸರಿಸುಮಾರು 36,000 ಕಿಲೋಮೀಟರ್ ದೂರದಲ್ಲಿರುವ ಭೂಸ್ಥಿರ ಎಲ್ ಬ್ಯಾಂಡ್ ಉಪಗ್ರಹಗಳಿಗೆ ಸಂದೇಶ ಕಳುಹಿಸಿದ ಪ್ರಯೋಗ ಯಶಸ್ವಿಯಾಗಿದೆ.

Also Read  ಕೊಂಬಾರು ಗ್ರಾಮಸ್ಥರಿಗೆ ಕೊನೆಗೂ ಬಂತು ನೆಟ್ವರ್ಕ್ ಭಾಗ್ಯ ➤ ಕೊಂಬಾರು ಹಾಗೂ ಸಿರಿಬಾಗಿಲಿನಲ್ಲಿ ಜಿಯೋ ಟವರ್ ಗೆ ಸಾಂಕೇತಿಕ ಚಾಲನೆ

ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಕರೆ ಮಾಡಲು ಯಾವುದೇ ಸಿಮ್ ಬೇಕಿಲ್ಲ, ಹಳ್ಳಿಯಾಗಲಿ, ಕಾಡಾಗಲಿ, ನೆಟ್‌ ವರ್ಕ್ ಇರಬೇಕಿಲ್ಲ. ಎಲ್ಲವೂ ಸ್ಯಾಟಲೈಟ್ ಮೂಲಕವೇ ಸಂವಹನ ನಡೆಯಲಿದೆ. ಆ್ಯಂಡ್ರಾಯ್ಡ್, ಐಒಎಸ್ ಮಾತ್ರವಲ್ಲ, ಸ್ಮಾರ್ಟ್‌ವಾಚ್ ಸೇರಿದಂತೆ ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು, ಕಾಲ್ ಮಾಡಲು ಸಾಧ್ಯವಿದೆ. ಈ ಸೇವೆ ಪ್ರಮುಖವಾಗಿ ನೆಟ್‌ವರ್ಕ್ ಇಲ್ಲದ, ರಿಮೋಟ್ ವಲಯಗಳಲ್ಲಿ ಮೊದಲ ಹಂತದಲ್ಲಿ ಬಳಕೆಯಾಗಲಿದೆ. ಈ ಮೂಲಕ ಮೂಲೆ ಮೂಲೆಯಲ್ಲಿರುವ ಜನರಿಗೆ ಸಂಪರ್ಕ ಸಾಧ್ಯವಾಗಿಸಲು ಬಿಎಸ್‌ಎನ್‌ಎಲ್ ಮಹತ್ತರ ಹೆಜ್ಜೆ ಇಟ್ಟಿದೆ.

error: Content is protected !!
Scroll to Top