(ನ್ಯೂಸ್ ಕಡಬ) newskadaba.com ಅ. 17. ಈಗಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಸದೇ ಇರುವವರು ತುಂಬಾ ವಿರಳ. ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡಿದ ಹಾಗೆ ಅದರ ಬ್ಯಾಟರಿ ಚಾರ್ಜ್ ಖಾಲಿಯಾಗೋದು ಸಾಮಾನ್ಯ ಸಂಗತಿ. ಅದರಲ್ಲೂ ಬ್ಯಾಟರಿ ಖಾಲಿಯಾದಾಗ ಚಾರ್ಜ್ ಗೆ ಹಾಕುವ ಎಲ್ಲರೂ 100% ಚಾರ್ಜ್ ಆಗೋ ತನಕ ಅದನ್ನು ತೆಗೆಯಲ್ಲ. ಆದರೆ ಇದೆಷ್ಟು ಡೇಂಜರ್ ಅಂತ ನಿಮಗೆ ತಿಳಿದಿದ್ಯಾ.. ಇಲ್ಲಿ ನೋಡೋಣ ಬನ್ನಿ..
ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್ ಫೋನ್ ಗಳಿರಬಹುದು. ಅದರಲ್ಲಿ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದ ನಂತರವೂ ಸ್ವಲ್ಪ ಸಮಯದಲ್ಲೇ 30-40 ಪ್ರತಿಶತಕ್ಕೆ ಇಳಿಯುತ್ತದೆ. ಇದಕ್ಕೆ ನೀವು ಬ್ಯಾಟರಿಯನ್ನು 100% ಚಾರ್ಜ್ ಮಾಡೋದೇ ಮುಖ್ಯ ಕಾರಣವಾಗಿದೆ ಅಂತ ಹೇಳುತ್ತಾರೆ. ಫೋನ್ ಅನ್ನು ಎಂದಿಗೂ 100 ಪ್ರತಿಶತದಷ್ಟು ಚಾರ್ಜ್ ಮಾಡಬಾರದು. ಅದು 90% 95% 98% ಇರುವಾಗಲೇ ನೀವು ತೆಗೆದುಬಿಡಬೇಕು. ಹೀಗಿರುವಾಗ ಮಾತ್ರ ನೀವು ಚಾರ್ಜ್ ಮಾಡಿದ್ದು ತುಂಬಾ ಸಮಯ ಹಾಗೆ ಇರುತ್ತೆ. ಅಲ್ಲದೇ ಮೊಬೈಲ್ ಕೂಡ ಉತ್ತಮ ಬಾಳಿಕೆ ಬರುತ್ತದೆ. ಹಾಗೆಯೆ ಚಾರ್ಜ್ 20 ಪ್ರತಿಶತಕ್ಕಿಂತ ಕಡಿಮೆಯಾದರೆ, ಫೋನ್ ಅನ್ನು ತಕ್ಷಣವೇ ಚಾರ್ಜ್ ಮಾಡಿಬಿಡಬೇಕು. ಚಾರ್ಜ್ ಫುಲ್ ಖಾಲಿ ಆಗೋ ತನಕ ಕೂಡಾ ಅದನ್ನು ಉಪಯೋಗಿಸಬಾರದು.