ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂದು ತಿಳಿಯಬೇಕೇ?

(ನ್ಯೂಸ್ ಕಡಬ) newskadaba.com ಅ.16. ಇಂದಿನ ದಿನಗಳಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿದ್ದು, ಸೈಬರ್ ಅಪರಾಧಿಗಳು ಜನರನ್ನು ಹಲವು ರೀತಿಯಲ್ಲಿ ವಂಚಿಸುತ್ತಿರುವ ಪ್ರಕರಣಗಳು ದಿನೇ ದಿನೇ ನಾವು ಕೇಳುತ್ತಿರುತ್ತೇವೆ. ಇವುಗಳಲ್ಲಿ ಸಿಮ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಂಚನೆಗಳೂ ಸೇರಿವೆ.

ಅದರಲ್ಲೂ ಈ ಸಿಮ್‌ ಕಾರ್ಡ್ ಆಧಾರದ ಮೇರೆಗೆ ನಡೆಯುವ ಭಾರೀ ನಷ್ಟಗಳಿಗೆ ಸಾಮಾನ್ಯ ಅಮಾಯಕರು ಸಿಲುಕಿಕೊಳ್ಳುತ್ತಾರೆ. ನಿಮ್ಮ ಆಧಾರ್ ಕಾರ್ಡ್ ತಪ್ಪಾದ ಕೈಗಳಿಗೆ ನಿಮ್ಮ ಫೋನ್ ಅಥವಾ ದಾಖಲೆಗಳು ಸಿಕ್ಕರೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ನೀವು ಅನೇಕ ಸುದ್ದಿಗಳನ್ನು ಕೇಳುತ್ತಿರಬಹುದು. ಅನೇಕ ಬಾರಿ ವಂಚನೆ ಮಾಡುವ ಜನರು ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಾರೆ. ನಂತರ ಅವರು ಮಾಡುವ ಪ್ರತಿಯೊಂದು ಘಟನೆಗಳಲ್ಲಿ ಬಳಸುವ ಸಿಮ್‌ ಕಾರ್ಡ್ ಆಧಾರದ ಮೇರೆಗೆ ಭಾರಿ ನಷ್ಟಕ್ಕೆ ಸಾಮಾನ್ಯ ಅಮಾಯಕರು ಸಿಲುಕಿಕೊಳ್ಳುತ್ತಾರೆ.

 

ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಎಷ್ಟು ಮೊಬೈಲ್ ಸಿಮ್ ಕಾರ್ಡ್ (SIM Card) ನೋಂದಾಯಿಸಲಾಗಿದೆ ಎನ್ನುವುದನ್ನು ತಿಳಿಯುವುದು ಬಹು ಮುಖ್ಯವಾಗಿದೆ. ಏಕೆಂದರೆ ನೀವು ಎಲ್ಲೇ ನಿಮ್ಮ ದಾಖಲೆಗಳಾದ ಆಧಾರ್, ಪಾನ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸನ್ಸ್ ಬಳಸುತ್ತಿರೋ ಅಲ್ಲಿ ಎಚ್ಚರಿಕೆಯಿಂದ 3 ಬಾರಿ ಯೋಚಿಸಿ ನೀಡಬೇಕಾಗುತ್ತದೆ. ಅದರಲ್ಲೂ ನೀವು ಎಲ್ಲೆಲ್ಲಿ ಜೆರಾಕ್ಸ್ ಅಥವಾ ಫೋಟೋ ಕಾಪಿ ಮಾಡಿಸುವಿರೋ ಅಲ್ಲಿ ಹೆಚ್ಚು ಜಾಗರೂಕರಾಗಿರಿ. ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಿಮ್ ಕಾರ್ಡ್ ನೋಂದಾಯಿಸಲಾಗಿದೆ ಎಂಬುದನ್ನು ನೀವು ಹೇಗೆ ಕಂಡುಹಿಡಿಯಲು ಹೀಗೆ ಮಾಡಿ.

Also Read  ಡಿವೈಡರ್ ಗೆ ಬೈಕ್ ಢಿಕ್ಕಿ- ಸವಾರ ಸ್ಥಳದಲ್ಲೇ ಮೃತ್ಯು

ಮೊದಲನೆಯದಾಗಿ TAFCOP ನ ಅಧಿಕೃತ ವೆಬ್‌ಸೈಟ್ https://tafcop.dgtelecom.gov.in/ ಗೆ ಹೋಗಿ ಮತ್ತು ಅದನ್ನು ತೆರೆಯಿರಿ.

ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕಾಗುತ್ತದೆ.

ಇದರ ನಂತರ ನೀವು OTP ಅನ್ನು ಸ್ವೀಕರಿಸುತ್ತೀರಿ. ಪೋರ್ಟಲ್‌ಗೆ ಸೈನ್ ಇನ್ ಮಾಡಲು ಈ OTP ಅನ್ನು ನಮೂದಿಸಿ ಮತ್ತು ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಇದರ ನಂತರ ನೀವು ಸೈನ್-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಇದರ ನಂತರ ನಿಮ್ಮನ್ನು ಮತ್ತೊಂದು ಪುಟಕ್ಕೆ ಕಳುಹಿಸುತ್ತದೆ ಇಲ್ಲಿ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೀವು ನೋಡಬಹುದು.

Also Read  8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ

ಒಂದು ವೇಳೆ ನಿಮಗೆ ತಿಳಿಯದ ಮೊಬೈಲ್ ಸಂಖ್ಯೆಗಳು ಈ ಪಟ್ಟಿಯಲ್ಲಿದ್ದರೆ ಅವನ್ನು ಮಾರ್ಕ್ ಮಾಡಿ ತೆಗೆದು ಹಾಕಿ ರಿಪೋರ್ಟ್ ಮಾಡಬಹುದು.

ದೂರಸಂಪರ್ಕ ಇಲಾಖೆ ಹೊರಡಿಸಿರುವ ನಿಯಮಗಳ ಪ್ರಕಾರ ಒಬ್ಬ ಭಾರತೀಯ ನಾಗರಿಕ ತನ್ನ ಆಧಾರ್ ಕಾರ್ಡ್‌ನೊಂದಿಗೆ ಒಟ್ಟಾರೆಯಾಗಿ ಕೇವಲ 9 ಮೊಬೈಲ್ ಸಂಖ್ಯೆಗಳನ್ನು ಪಡೆಯಬಹುದು. ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ಸಹ ನೀವು ತಿಳಿಯಬಹುದು.

error: Content is protected !!
Scroll to Top