(ನ್ಯೂಸ್ ಕಡಬ) newskadaba.com ಅ. 15. ಚೆನ್ನೈ ಮೂಲದ ಹೊಸ EV ಸ್ಟಾರ್ಟ್ ಅಪ್ ಕಂಪನಿಯಾದ ರಾಪ್ಟೀ.ಎಚ್‌ವಿ (Raptee.HV) ಇಂದು ಭಾರತದ ಮೊದಲ ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ವಿಶ್ವದಾದ್ಯಂತ ಇಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುವ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಇದು ಗಮನಾರ್ಹವಾಗಿ ಕಡಿಮೆ ಶಾಖದೊಂದಿಗೆ 250-300cc ಸಾಮರ್ಥ್ಯದ ಇಂಧನ ಚಾಲಿತ ಮೋಟಾರ್‌ಸೈಕಲ್‌ಗಳಷ್ಟು ಪರ್ಫಾಮೆನ್ಸ್ ನೀಡುವಂತಹ ಮೋಟಾರ್‌ಸೈಕಲ್ ಆಗಿದೆ ಎಂದು ಕಂಪನಿ ತಿಳಿಸಿದೆ. Raptee.HV ಮೋಟಾರ್ ಸೈಕಲ್‌ಗಳು, ಎಲೆಕ್ಟ್ರಿಕ್ ಕಾರುಗಳು ಬಳಸುವ ಚಾರ್ಜಿಂಗ್ ಮಾನದಂಡಗಳು ಹಾಗೂ ಹೈ-ವೋಲ್ಟೇಜ್ (HV) ತಂತ್ರಜ್ಞಾನದೊಂದಿಗೆ ಬರುವ ಭಾರತದ ಮೊದಲ ದ್ವಿಚಕ್ರ ವಾಹನಗಳಾಗಿವೆ. ಇವು ಆನ್ ಬೋರ್ಡ್ ಚಾರ್ಜರ್ ನೊಂದಿಗೆ, ದೇಶದಾದ್ಯಂತ ಲಭ್ಯವಿರುವ 13,500 CCS2 ಕಾರ್ ಚಾರ್ಜಿಂಗ್ ಸ್ಟೇಷನ್ ಗಳಿಗೆ ಹೊಂದಿಕೆಯಾಗುತ್ತವೆ ಎಂದು ಕಂಪನಿ ಹೇಳಿದೆ.
ಈ ಮೋಟಾರ್ ಸೈಕಲ್ ಅನ್ನು 250-300cc ICE ಮೋಟಾರ್ ಸೈಕಲ್‌ಗಳಿಗೆ ಸರಿಸಮಾನವಾಗಿ ರೂ.2.39 ಲಕ್ಷಗಳ ಸ್ಪರ್ಧಾತ್ಮಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. Raptee.HV ಮೋಟಾರ್ ಸೈಕಲ್ ಸುಮಾರು 200 ಕಿ.ಮೀಗಳ IDC Est ರೇಂಜ್ ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 150 ಕಿಮೀ ಗಿಂತ ನಷ್ಟು ನೈಜ್ ರೇಂಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಈ ಮೋಟಾರ್ ಸೈಕಲ್ 3.5 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ IP67 ರೇಟ್ ಮಾಡಲಾದ ಬ್ಯಾಟರಿ ಪ್ಯಾಕ್ ಅನ್ನು ನೀಡುವ ಮೂಲಕ ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಖಾತ್ರಿಪಡಿಸಿದೆ. Raptee.HV ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಬಹುದಾದ ಬ್ಯಾಟರಿಯನ್ನು ಹೊಂದಿದ್ದು, 8 ವರ್ಷಗಳು ಅಥವಾ 80,000 ಕಿ.ಮೀಗಳವರೆಗೆ, ಗ್ರಾಹಕರಿಗೆ ದೀರ್ಘಾವಧಿಯ ಮೌಲ್ಯವನ್ನು ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ. Raptee.HV ಮೋಟಾರ್ ಸೈಕಲ್‌ಗಳು ಹರೈಸನ್ ರೆಡ್, ಆರ್ಕ್ಟಿಕ್ ವೈಟ್, ಮರ್ಕ್ಯುರಿ ಗ್ರೇ ಮತ್ತು ಎಕ್ಲಿಪ್ಸ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಸಿಗಲಿವೆ.
ಕಂಪನಿಯ ಸಹ-ಸ್ಥಾಪಕ ಮತ್ತು CEO ದಿನೇಶ್ ಅರ್ಜುನ್ ಮಾತನಾಡಿ, ಜನವರಿಯಿಂದ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಡೆಲಿವರಿಗಳನ್ನು ಆರಂಭಿಸಿ, ಆಯ್ದ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯ ಅಳವಡಿಕೆಯ ಆಧಾರದ ಮೇಲೆ ಇತರ ಪ್ರಮುಖ ನಗರಗಳಿಗೆ ವಿಸ್ತರಿಸಲಿದ್ದೇವೆ. ನಮ್ಮ ಗುರಿ ಇಂಧನ ಚಾಲಿತ ಮೋಟಾರ್ ಸೈಕಲ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ರಚಿಸುವುದಲ್ಲ, ನಿಜವಾದ ಪ್ರವರ್ತಕ ತಂತ್ರಜ್ಞಾನದೊಂದಿಗೆ ಮೋಟಾರ್ ಸೈಕ್ಲಿಂಗ್‌ಗೆ ನ್ಯಾಯ ಸಲ್ಲಿಸುವುದು ಎಂದು ಹೇಳಿದ್ದಾರೆ.