ವಿಪರೀತ ಜ್ವರದಿಂದ ಯುವಕ ಮೃತ್ಯು..!



(ನ್ಯೂಸ್ ಕಡಬ)newskadaba.com ವಿಟ್ಲ, ಅ. 05. ಮಂಗಿಲಪದವು ಬನಾರಿ ನಿವಾಸಿ ಯುವಕನೊಬ್ಬ ವಿಪರೀತ ಜ್ವರದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಅಬೂಬಕ್ಕರ್ ಸಿದ್ದೀಕ್ (30) ಎಂದು ಗುರುತಿಸಲಾಗಿದೆ.







ಎರಡು, ಮೂರು ದಿನಗಳ ವಿಪರೀತ ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಃ ವಿಟ್ಲ ಸಮೀಪದ ಮೇಗಿನಪೇಟೆ ಕಾಟ್ರಸ್ ನಿವಾಸಿಯಾಗಿದ್ದು, ಪ್ರಸ್ತುತ ವಿಟ್ಲ ಸಮೀಪದ ಮಂಗಿಲಪದವು ಬಾಬಟ್ಟ ಬನಾರಿ ಎಂಬಲ್ಲಿ ನೆಲೆಸಿದ್ದರು ಎನ್ನಲಾಗಿದೆ.






 

 

error: Content is protected !!
Scroll to Top