ಬೆಂಗಳೂರಿಗೆ ಲಗ್ಗೆ ಇಡಲಿದೆ ಅಧಿಕೃತ ಆ್ಯಪಲ್ ಸ್ಟೋರ್; ಕಂಪೆನಿಯಿಂದ ಘೋಷಣೆ

(ನ್ಯೂಸ್ ಕಡಬ)newskadaba.com,ಕ್ಯಾಲಿಫೋರ್ನಿಯಾ (.04):  ಭಾರತದಲ್ಲಿ ಪುಣೆ, ಬೆಂಗಳೂರು, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಂತಹ ನಗರಗಳಲ್ಲಿ ಇನ್ನೂ ನಾಲ್ಕು ರಿಟೇಲ್‌ ಸ್ಟೋರ್‌ಗಳನ್ನು ತೆರೆಯುವುದಾಗಿ  ಆಪಲ್ ಶುಕ್ರವಾರ ಪ್ರಕಟಿಸಿದೆ. ಭಾರತದಲ್ಲಿ ನಮ್ಮ ಗ್ರಾಹಕರ ಸೃಜನಶೀಲತೆ ಮತ್ತು ಉತ್ಸಾಹದಿಂದ ನಾವು ಪ್ರೇರಿತರಾಗಿರುವುದರಿಂದ ಭಾರತದಲ್ಲಿ ಹೆಚ್ಚಿನ ಸ್ಟೋರ್‌ಗಳನ್ನು ತೆರೆಯಲು ನಾವು ಪ್ಲ್ಯಾನ್‌ ಮಾಡುತ್ತಿದ್ದೇವೆ. ನಮ್ಮ ತಂಡಗಳನ್ನು ನಿರ್ಮಿಸಲು ನಾವು ಉತ್ಸಾಹಿತರಾಗಿದ್ದೇವೆ” ಎಂದು ಆಪಲ್‌ನ ರಿಟೇಲ್‌ ವ್ಯವಹಾರದ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ’ಬ್ರಿಯಾನ್ ತಿಳಿಸಿದ್ದಾರೆ. ನಮ್ಮ ಅದ್ಭುತ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಮತ್ತು ಶಾಪಿಂಗ್ ಮಾಡಲು ಮತ್ತು ನಮ್ಮ ಅಸಾಧಾರಣ, ಜ್ಞಾನವುಳ್ಳ ತಂಡದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಇನ್ನೂ ಹೆಚ್ಚಿನ ಅವಕಾಶಗಳನ್ನು ಹೊಂದಲು ನಾವು ಇನ್ನೂ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Also Read  ಉಜಿರೆ: ಯುವಕನ ಮೇಲೆ ಹಲ್ಲೆ ಪ್ರಕರಣ ➤ ನಾಲ್ವರ ವಿರುದ್ಧ ಕೇಸ್ ದಾಖಲು


2023ರ ಏಪ್ರಿಲ್‌ನಲ್ಲಿ ದೆಹಲಿ ಹಾಗೂ ಮುಂಬೈನಲ್ಲಿ ಆಪಲ್‌ ತನ್ನ ಎರಡು ಅಧಿಕೃತ ಸ್ಟೋರ್‌ಗಳನ್ನು ಅನಾವರಣ ಮಾಡಿದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಹೊಸ ನಾಲ್ಕು ಸ್ಟೋರ್‌ಗಳು ಮುಂದಿನ ವರ್ಷ ತೆರೆಯಲಿದೆ ಎನ್ನಲಾಗಿದೆ. ಬೆಂಗಳೂರಿನ ಯಾವ ಪ್ರದೇಶದಲ್ಲಿ ಆಪಲ್‌ ಸ್ಟೋರ್‌ ಆರಂಭವಾಗಲಿದೆ ಎನ್ನುವುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಮೂಲಗಳ ಪ್ರಕಾರ, ಎಂಜಿ ರೋಡ್‌ನ ಬ್ರಿಗೇಡ್‌ ರೋಡ್‌, ಇಂದಿರಾನಗರ ಅಥವಾ ಕೋರಮಂಗಲದ ಬಳಿ ಆಪಲ್‌ ಸ್ಟೋರ್‌ ಅನಾವರಣವಾಗುವ ಸಾಧ್ಯತೆ ಇದೆ.
“ಆಪಲ್ ಈಗ ಭಾರತದಲ್ಲಿ iPhone 16 Pro ಮತ್ತು iPhone 16 Pro Max ಸೇರಿದಂತೆ ಸಂಪೂರ್ಣ iPhone 16 ಶ್ರೇಣಿಯನ್ನು ತಯಾರಿಸುತ್ತಿದೆ” ಎಂದು ಕಂಪನಿ ಹೇಳಿದೆ. ಆಪಲ್ 2017 ರಲ್ಲಿ ಭಾರತದಲ್ಲಿ ಐಫೋನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು ಮತ್ತು ಅದರ ಇತ್ತೀಚಿನ ಐಫೋನ್ 16 ಪ್ರೊ ಮಾದರಿಗಳನ್ನು ಸ್ಥಳೀಯವಾಗಿ ತಯಾರಿಸುವ ನಿರ್ಧಾರವು ಈ ಪ್ರದೇಶದಲ್ಲಿ ಅದರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Also Read  ಸಿಎಂ ಸಿದ್ದರಾಮಯ್ಯ ಎದುರೇ ಕಿತ್ತಾಡಿಕೊಂಡ `ಕೈ' ನಾಯಕಿಯರು

error: Content is protected !!
Scroll to Top