ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

(ನ್ಯೂಸ್ ಕಡಬ) newskadaba.com ಸೆ. 27. ಇಲ್ಲಿಗೆ ಸಮೀಪದ ನಾಡ ಗ್ರಾಮದ ಕೋಣ್ಕಿ ಚಂದ್ರ ಪ್ರಕಾಶ್ ಶೆಟ್ಟಿ ಎಂಬವರ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

 

ಬಡಾಕೆರೆ ಜೋಯಿಸರ ಬೆಟ್ಟು ಚಂದ್ರಪ್ರಕಾಶ ಶೆಟ್ಟಿ ಅವರು ಎಂದಿನಂತೆ ತಮ್ಮ ಹೋಂಡಾ ಅಮೇಜ್ ಕಾರನ್ನು ಚಲಾಯಿಸುತ್ತಾ ಬರುತ್ತಿದ್ದಾಗ ದಾರಿ ಮಧ್ಯೆ ಬಾನೆಟ್ ಒಳಗಿನಿಂದ ಜೋರಾದ ಶಬ್ಧ ಕೇಳಿಸಿದೆ. ತಕ್ಷಣ ಕಾರು ನಿಲ್ಲಿಸಿ ಬಾನೆಟ್ ಎತ್ತಿ ನೋಡಿದಾಗ ಸುಮಾರು 12 ಅಡಿ ಉದ್ದದ ಹೆಬ್ಬಾವು ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ. ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ಕಾರಿನ ಬಾನೆಟ್ ಒಳಗಿರುವ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Scroll to Top