ಕಡಬದಲ್ಲಿ ವೃದ್ದರೋರ್ವರಿಗೆ ಡಿಕ್ಕಿ ಹೊಡೆದ ಇಕೋ – ಗಾಯಾಳುವನ್ನು ಆಸ್ಪತ್ರೆ ಗೆ ದಾಖಲಿಸಿ ನಾಪತ್ತೆ

(ನ್ಯೂಸ್ ಕಡಬ) newskadaba.com ಸೆ. 26. ಅಪರಿಚಿತ ವೃದ್ದರೋರ್ವರಿಗೆ ಡಿಕ್ಕಿ ಹೊಡೆದು ಬಳಿಕ ಅದೇ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಡಿಕ್ಕಿ ಹೊಡೆದ ಕಾರು ಸಮೇತ ಚಾಲಕ ನಾಪತ್ತೆಯಾದ ಘಟನೆ ಗುರುವಾರದಂದು ನಡೆದಿದೆ.


ಗಾಯಾಳು ಅಪರಿಚಿತ ವೃದ್ದ ವ್ಯಕ್ತಿಯನ್ನು ಕಡಬದಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆ ಗೆ ಕೊಂಡೊಯ್ಯಲಾಗಿದೆ. ಕುಟ್ರುಪಾಡಿ ಕಡೆಯಿಂದ ವೇಗವಾಗಿ ಬಂದ ಮಹೇಂದ್ರ XUV ವಾಹನ ಮುಖ್ಯ ರಸ್ತೆಗೆ ಏಕಾಏಕಿ ಪ್ರವೇಶಿಸಿದ್ದು, ಈ ವೇಳೆ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಇಕೋ ವಾಹನ ಅಪಘಾತ ತಪ್ಪಿಸಲೆತ್ನಿಸಿ ಅಲ್ಲೇ ರಸ್ತೆ ಬದಿಯಲ್ಲಿದ್ದ ಪಾದಚಾರಿ ವೃದ್ದರಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಗೊಂಡ ವೃದ್ದನನ್ನು ಸ್ಥಳೀಯರ ಸಹಕಾರದೊಂದಿಗೆ ಅದೇ ವಾಹನದಲ್ಲಿ ಅದರ ಚಾಲಕ ಕಡಬ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ದೂರವಾಣಿ ಸಂಖ್ಯೆ ನೀಡಿ ತೆರಳಿದ್ದರು. ವಾರಸುದಾರರಿಲ್ಲದ ವೃದ್ದರನ್ನು ಪ್ರಥಮ ಚಿಕಿತ್ಸೆ ನೀಡಿ ಪುತ್ತೂರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಕಡಬ ಪೋಲಿಸರು ಡಿಕ್ಕಿ ಹೊಡೆದ ವಾಹನ ಹಾಗೂ ಚಾಲಕನನ್ನು ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Scroll to Top